'ಆಶಿಕಿ' ಪ್ರಣಯ ಮರುಕಳಿಸುವವರೆ ಹೃತಿಕ್ ಮತ್ತು ಸೋನಮ್? ಸಂಗೀತ-ಪ್ರಣಯ ಪ್ರಧಾನ ಸಿನೆಮಾ 'ಆಶಿಕಿ'ಯ ೨೫ನೆಯ ವರ್ಷಾಚರಣೆಯ ಸಂದರ್ಭಕ್ಕೆ ಬಾಲಿವುಡ್ ನಟರಾದ ಹೃತಿಕ್ ರೋಶನ್ ಮತ್ತು ಸೋನಮ್ ಕಪೂರ್ ಅವರು ಟರ್ಕಿಯಲ್ಲಿ 'ಧೀರೆ ಸಂಗೀತ-ಪ್ರಣಯ ಪ್ರಧಾನ ಸಿನೆಮಾ 'ಆಶಿಕಿ'ಯ ೨೫ನೆಯ ವರ್ಷಾಚರಣೆಯ ಸಂದರ್ಭಕ್ಕೆ ಬಾಲಿವುಡ್ ನಟರಾದ ಹೃತಿಕ್ ರೋಶನ್ ಮತ್ತು ಸೋನಮ್ ಕಪೂರ್ ಅವರು ಟರ್ಕಿಯಲ್ಲಿ 'ಧೀರೆ ಧೀರೆ' ಹಾಡಿನ ಮರು ಚಿತ್ರೀಕರಣ ಮಾಡಿದ್ದಾರೆ. ಈ ವಿಡಿಯೋ ಹಾಡಿನ ಸ್ಟಿಲ್ ಗಳನ್ನು ನಂಬುವುದಾದರೆ ಕ್ಲಾಸಿಕ್ ಪ್ರಣಯ ಮರುಕಳಿಸಿದೆ ಎನ್ನಲಾಗುತ್ತಿದೆ. ಈ ಸಂಗೀತ-ಪ್ರಣಯ ಪ್ರಧಾನ ಸಿನೆಮಾ ಸಂಭ್ರಮಕ್ಕೆ ಟಿ-ಸೀರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ವಿಡಿಯೋ ಚಿತ್ರೀಕರಣದ ಯೋಜನೆ ಸಿದ್ಧಪಡಿಸಿದ್ದಾರೆ. ಈ ದೃಶ್ಯಗಳ ಹಿಂದೆ ಹೃತಿಕ್ ಹೊಳೆಯುತ್ತಿದ್ದರೆ, ಸೋನಮ್ ಸುಂದರವಾಗಿ ಕಾಣಿಸುತ್ತಿದ್ದಾರೆ ಎಂಬುದು ವೀಕ್ಷಕರ ಅಭಿಪ್ರಾಯ. ಹೃತಿಕ್ ಮತ್ತು ಸೋನಮ್ ಬೆಳ್ಳಿತೆರೆಯಲ್ಲಿ ಇಲ್ಲಿಯವರೆಗೂ ಒಂದಾಗಿಲ್ಲ. ಆದುದರಿಂದ ಈ ವಿರಳವಾದ ವಿಡಿಯೋದಲ್ಲಿ ಇಬ್ಬರನ್ನೂ ಒಟ್ಟಿಗೆ ತರಲಾಗಿದೆ ಎನ್ನುತ್ತಾರೆ ಭೂಷಣ್.