ಸಲ್ಮಾನ್ ಖಾನ್ ಅಭಿನಯದ 'ರಾಧೆ' ಚಿತ್ರ: ಪೈರೆಸಿ ಕಂಡುಬಂದ ಅಕೌಂಟ್ ರದ್ದುಪಡಿಸುವಂತೆ ವಾಟ್ಸಾಪ್ ಗೆ ದೆಹಲಿ ಹೈಕೋರ್ಟ್ ಆದೇಶ ಸಲ್ಮಾನ್ ಖಾನ್ ಅಭಿನಯದ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಬಾಯ್ ಚಿತ್ರವನ್ನು ಅನಧಿಕೃತವಾಗಿ ಪೈರೇಟ್ಸ್ ಪ್ರತಿಗಳ ಶೇರ್ ಮಾಡುವುದು, ಸ್ಟೋರ್ ಮಾಡುವುದು, ಹಂಚುವುದು ಮತ್ತು ಮಾರಾಟ ಮಾಡುವುದು ಕಂಡುಬಂದರೆ ಅಂತಹ ಅಕೌಂಟ್ ಗಳನ್ನು ಇನ್ನು ಮುಂದೆ ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್ ವಾಟ್ಸಾಪ್ ಗೆ ಆದೇಶ ನೀಡಿದೆ. ನವದೆಹಲಿ: ಸಲ್ಮಾನ್ ಖಾನ್ ಅಭಿನಯದ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಬಾಯ್ ಚಿತ್ರವನ್ನು ಅನಧಿಕೃತವಾಗಿ ಪೈರೇಟ್ಸ್ ಪ್ರತಿಗಳ ಶೇರ್ ಮಾಡುವುದು, ಸ್ಟೋರ್ ಮಾಡುವುದು, ಹಂಚುವುದು ಮತ್ತು ಮಾರಾಟ ಮಾಡುವುದು ಕಂಡುಬಂದರೆ ಅಂತಹ ಅಕೌಂಟ್ ಗಳನ್ನು ಇನ್ನು ಮುಂದೆ ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್ ವಾಟ್ಸಾಪ್ ಗೆ ಆದೇಶ ನೀಡಿದೆ.ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ, ಯಾರಾದರೂ ಅನಧಿಕೃತವಾಗಿ ಚಿತ್ರವನ್ನು ಸಂಗ್ರಹಿಸುವುದು, ಮರು ಸೃಷ್ಟಿಸುವುದು, ಸಂವಹನ ಮಾಡುವುದು, ಪ್ರಸಾರ ಮಾಡುವುದು, ನಕಲಿ ಮಾಡುವುದು, ಮಾರಾಟ ಮಾಡುವುದು, ಮಾರಾಟಕ್ಕೆ ನೀಡುವುದು ಅಥವಾ ಚಿತ್ರದ ಪ್ರತಿಗಳನ್ನು ವಾಟ್ಸಾಪ್ ಅಥವಾ ಇತರ ಯಾವುದೇ ವಿಧಾನಗಳ ಮೂಲಕ ಸಿಗುವಂತೆ ಮಾಡುವುದು ಕಂಡುಬಂದರೆ ಫಿರ್ಯಾದಿದಾರರ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಹೇಳಿದೆ.ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್, ಚಲನಚಿತ್ರವನ್ನು ವಿತರಿಸಲು ಅಥವಾ ಬಿಡುಗಡೆ ಮಾಡಲು ವಿಶೇಷ ಪರವಾನಗಿ ಹೊಂದಿದೆ.