ಪಾಕಿಸ್ತಾನ ಜಾಹೀರಾತಿನಲ್ಲಿ ಸೋನಂ ಕಪೂರ್, ನೀರ್ಜಾ ಚಿತ್ರಕ್ಕೆ ಪಾಕ್ ನಲ್ಲಿ ನಿಷೇಧ ನೀರ್ಜಾ ಖ್ಯಾತಿಯ ನಟಿ ಸೋನಮ್‌ ಕಪೂರ್‌ ಅವರು ಪಾಕಿಸ್ಥಾನದ ಜಾಹೀರಾತೊಂದರಲ್ಲಿ ಕೆಲಸ ಮಾಡಿದ್ದಾರೆ. ಪಾಕಿಸ್ಥಾನದ ತರಂಗ್‌ ಹಾಲಿನ... ಮುಂಬಯಿ: ನೀರ್ಜಾ ಖ್ಯಾತಿಯ ನಟಿ ಸೋನಮ್‌ ಕಪೂರ್‌ ಅವರು ಪಾಕಿಸ್ಥಾನದ ಜಾಹೀರಾತೊಂದರಲ್ಲಿ ಕೆಲಸ ಮಾಡಿದ್ದಾರೆ. ಪಾಕಿಸ್ಥಾನದ ತರಂಗ್‌ ಹಾಲಿನ ಈ ಜಾಹೀರಾತಿನಲ್ಲಿ ನಟಿ ಸೋನಮ್‌ ಕಪೂರ್‌ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಸೋನಮ್‌ ಕಪೂರ್‌ ಅವರ ನೀರ್ಜಾ ಚಿತ್ರಕ್ಕೆ ಪಾಕಿಸ್ಥಾನದಲ್ಲಿ ನಿಷೇಧ ಹೇರಲಾಗಿದೆ. ಆದರೂ, ಸೋನಂ ಕಪೂರ್ ಪಾಕಿಸ್ಥಾನದ ಹಾಲಿನ ಬ್ರ್ಯಾಂಡ್ ಗೆ ಜಾಹೀರಾತು ನೀಡಿದ್ದಾರೆ. ಸೋನಮ್‌ ಕಪೂರ್‌ ಮತ್ತು ಪಾಕಿಸ್ತಾನ ನಟ ಫವಾದ್‌ ಖಾನ್‌ ಅವರ ಈ ಜಾಹೀರಾತು ಪಾಕಿಸ್ಥಾನದ ಅತ್ಯಂತ ದುಬಾರಿ ಜಾಹೀರಾತು ಆಗಿದೆ ಎಂದು ಜಾಹೀರಾತು ಕ್ಷೇತ್ರದ ಮೂಲಗಳು ಹೇಳುತ್ತವೆ. ತರಂಗ್‌ ಹಾಲು ಅನ್ನು ಪಾಕಿಸ್ಥಾನದ ನಂ. 1 ಹಾಲು ಎಂದು ಕರೆಯಲಾಗುತ್ತದೆ. ಸೋನಮ್‌ ಕಪೂರ್‌ ಅವರ ತರಂಗ್‌ ಹಾಲಿನ ಜಾಹೀರಾತು ಅನ್ನು ನಿರ್ದೇಶಕ ಅಸೀಂ ರಾಜಾ ಅವರು ಚಿತ್ರೀಕರಿಸಿದ್ದರು. ಈ ಜಾಹೀರಾತಿನಲ್ಲಿ ಸೋನಮ್‌ ಕಪೂರ್‌ ಸಿಂಡ್ರೆಲ್ಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತರಂಗ್‌ನ ಈ ಜಾಹೀರಾತನ್ನು ದುಬಾಯಿನಲ್ಲಿ ಚಿತ್ರೀಕರಿಸಲಾಗಿತ್ತು. ಈ ಸಂಬಂಧ ಸ್ವತಃ ಫವಾದ್‌ ಖಾನ್‌ ಅವರು ಟ್ವೀಟ್‌ ಮಾಡಿದ್ದಾರೆ. .