ಕೋವಿಡ್ ಬಿಕ್ಕಟ್ಟು: ಉದ್ಯೋಗ ವಂಚಿತರಿಗೆ ಇ-ರಿಕ್ಷಾ ಗಿಫ್ಟ್ ನೀಡುವ ಕಾರ್ಯಕ್ರಮಕ್ಕೆ ನಟ ಸೋನು ಸೂದ್ ಚಾಲನೆ ಕೊರೋನಾವೈರಸ್ ಸಾಂಕ್ರಾಮಿಕದ ವೇಳೆ ಬದುಕಿನ ಮೂಲವನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ದುರ್ಬಲ ಜನರಿಗೆ ಇ- ರಿಕ್ಷಾ ಒದಗಿಸುವ ನೂತನ ಕಾರ್ಯಕ್ರಮವೊಂದನ್ನು ಬಾಲಿವುಡ್ ನಟ ಸೋನು ಸೂದ್ ಚಾಲನೆ ನೀಡಿದ್ದಾರೆ. ಮುಂಬೈ: ಕೊರೋನಾವೈರಸ್ ಸಾಂಕ್ರಾಮಿಕದ ವೇಳೆ ಬದುಕಿನ ಮೂಲವನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ದುರ್ಬಲ ಜನರಿಗೆ ಇ- ರಿಕ್ಷಾ ಒದಗಿಸುವ ನೂತನ ಕಾರ್ಯಕ್ರಮವೊಂದನ್ನು ಬಾಲಿವುಡ್ ನಟ ಸೋನು ಸೂದ್ ಚಾಲನೆ ನೀಡಿದ್ದಾರೆ.'ದಬಾಂಗ್' 'ಜೋಧಾ ಅಕ್ಬರ್' ಮತ್ತು 'ಸಿಂಬಾ' ಚಿತ್ರಗಳ ಮೂಲಕ ಹೆಸರಾಗಿರುವ ಸೋನು ಸೂದ್, ಈ ವರ್ಷದ ಆರಂಭದಲ್ಲಿ ಕೊರೋನಾವೈರಸ್ ಕಾಣಿಸಿಕೊಂಡ ನಂತರ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ತಲುಪಲು ಪರಿತಪಿಸುತ್ತಿದ್ದ ವಲಸೆ ಜನರು ತಮ್ಮೂರಿಗೆ ಮರಳಲು ಸೋನ್ ಸೂದ್ ತಮ್ಮ ಸ್ವಂತ ಹಣದಲ್ಲಿ ಬಸ್ ಗಳ ವ್ಯವಸ್ಥೆ ಮಾಡಿದ್ದರು.'ಖುದ್ ಕಮಾವೊ ಘರ್ ಚಲಾವೊ' ಎಂಬ ಹೆಸರಿನ ಈ ಕಾರ್ಯಕ್ರಮ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು 47 ವರ್ಷದ ಸೋನ್ ಸೂದ್ ಹೇಳಿದ್ದಾರೆ. , . - . . @ ##://./hN5ERGVMqT ../CuAum9vYyGಏನನ್ನಾದರೂ ನೀಡುವುದಕ್ಕಿಂತಲೂ ಉದ್ಯೋಗ ಒದಗಿಸುವುದು ಪ್ರಮುಖವಾದದ್ದು ಎಂಬುದರಲ್ಲಿ ನಂಬಿಕೆ ಹೊಂದಿದ್ದು, ಈ ಕಾರ್ಯಕ್ರಮ ಅವರನ್ನು ಸ್ವಾವಲಂಬಿಗಳನ್ನಾ ಮಾಡುವ ಮೂಲಕ ಮತ್ತೆ ತಮ್ಮ ಕಾಲುಗಳ ಮೇಲೆ ನಿಲ್ಲಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ಇರುವುದಾಗಿ ಸೂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸಾಂಕ್ರಾಮಿಕದ ವೇಳೆ ಉದ್ಯೋಗ ಕಳೆದುಕೊಂಡವರನ್ನು ಕಂಪನಿಗಳಿಗೆ ಸಂಪರ್ಕಿಸುವುದು ಮತ್ತು ಅವರ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಈ ಹಿಂದೆ ಪ್ರವಾಸಿ ರೋಜ್ಗಾರ್ ಆ್ಯಪ್ ನ್ನು ಸಹ ಸೋನು ಸೂದ್ ಪ್ರಾರಂಭಿಸಿದ್ದರು.