ಲಗಾನ್, ಜೋಧಾ ಅಕ್ಬರ್ ಸಿನಿಮಾ ಕಲಾ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆ! ಬಾಲಿವುಡ್‌ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ನೇಣಿಗೆ ಶರಣಾಗಿದ್ದಾರೆ. ಹಲವು ಹಿಟ್‌ ಸಿನಿಮಾಗಳಿಗೆ ಸೆಟ್‌ ನಿರ್ಮಿಸಿದ್ದ ನಿತಿನ್ ದೇಸಾಯಿ ಪ್ರೊಡಕ್ಷನ್ ಡಿಸೈನರ್ ಆಗಿಯೂ ಗುರುತಿಸಿಕೊಂಡಿದ್ದರು. ಬಾಲಿವುಡ್‌ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ನೇಣಿಗೆ ಶರಣಾಗಿದ್ದಾರೆ. ಹಲವು ಹಿಟ್‌ ಸಿನಿಮಾಗಳಿಗೆ ಸೆಟ್‌ ನಿರ್ಮಿಸಿದ್ದ ನಿತಿನ್ ದೇಸಾಯಿ ಪ್ರೊಡಕ್ಷನ್ ಡಿಸೈನರ್ ಆಗಿಯೂ ಗುರುತಿಸಿಕೊಂಡಿದ್ದರು. ನಿರ್ದೇಶಕ ನಿತಿನ್ ದೇಸಾಯಿ ಹಿಂದಿ, ಮರಾಠಿ ಕಿರುತೆರೆಯಲ್ಲೂ ಕೆಲಸ ಮಾಡಿದ ಇವರು ಒಂದೆರಡು ಸಿನಿಮಾಗಳನ್ನು ನಿರ್ದೇಶಿಸಿ ಕೆಲ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿಭಾಯಿಸಿದ್ದರು.ಸಂಜಯ್‌ ಲೀಲಾ ಬನ್ಸಾಲಿ, ವಿದ್ಯು ವಿನೋದ್ ಚೋಪ್ರಾ, ಹೀಗೆ ಹಲವಾರು ದೊಡ್ಡ ದೊಡ್ಡ ನಿರ್ದೇಶಕರ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಇವರು ತಮ್ಮ ಉತ್ತಮ ಕಲಾ ನಿರ್ದೇಶನಕ್ಕಾಗಿ 4 ಬಾರಿ ರಾಷ್ಟ್ರಪ್ರಶಸ್ತಿ ಪಡೆದು ಹೆಗ್ಗಳಿಕೆಗೆ ಪಾತ್ರರಾಗಿದ್ದರು.ಇದನ್ನೂ ಓದಿ: ಗಗನಸಖಿ ಆತ್ಮಹತ್ಯೆ ಪ್ರಕರಣ: ಹರ್ಯಾಣ ಮಾಜಿ ಸಚಿವ ಕಂಡಾ ನಿರ್ದೋಷಿ ಎಂದ ದೆಹಲಿ ಕೋರ್ಟ್ನಿರ್ದೇಶಕ ಮುಂದಿನ ವಾರ (ಆಗಸ್ಟ್‌ 9) ತಮ್ಮ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ದುರಾದೃಷ್ಟವಶಾತ್‌ ಕರ್ಜತ್‌ನ ಎನ್‌ಡಿ ಸ್ಟುಡಿಯೋದಲ್ಲಿ ನೇಣಿಗೆ ಶರಣಾಗಿದ್ದಾರೆ. ಕಲಾ ನಿರ್ದೇಶಕ ನಿತಿನ್‌ ದೇಸಾಯಿ ಲಗಾನ್, ದೇವದಾಸ್, ಜೋದಾ ಅಕ್ಬರ್, ಹಮ್ ದಿಲ್ ದೆ ಜುಕೆ ಸನಂ, ಪ್ರೇಮ್ ರತನ್ ದನ್ ಪಾಯೋದಂತಹ ಸೂಪರ್‌ ಹಿಟ್‌ ಸಿನಿಮಾಗಳಿಗೆ ಸೆಟ್‌ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದರು.ಇದನ್ನೂ ಓದಿ: ಪುಣೆ: ಪತ್ನಿ, ಸೋದರಳಿಯನನ್ನು ಗುಂಡಿಕ್ಕಿ ಕೊಂದು ಎಸಿಪಿ ತಾನೂ ಆತ್ಮಹತ್ಯೆಗೆ ಶರಣು2019 ರ ಪಾಣಿಪತ್ ಸಿನಿಮಾದಲ್ಲಿ ಅಶುತೋಷ್ ಗೋವಾರಿಕರ್ ಅವರೊಂದಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದು ಕೊನೆಯ ಚಿತ್ರವಾಗಿತ್ತು. ಅವರ ಕೆಲಸಕ್ಕಾಗಿ, ಹಾಲಿವುಡ್‌ನ ಪ್ರತಿಷ್ಠಿತ ಕಲಾ ನಿರ್ದೇಶಕರ ಗಿಲ್ಡ್ ಫಿಲ್ಮ್ ಸೊಸೈಟಿ ಮತ್ತು ಅಮೇರಿಕನ್ ಸಿನಿಮಾಥೆಕ್ ಅವರನ್ನು ಗೌರವಿಸಿತು.