ಈಜುಕೊಳದಲ್ಲಿ ನಟಿ ರಾಧಿಕಾ ಮದನ್ ವರ್ಕೌಟ್, ವಿಡಿಯೋ ವೈರಲ್! ಬಾಲಿವುಡ್ ನಟಿ ರಾಧಿಕಾ ಮದನ್ ಈಜುಕೋಳದಲ್ಲಿ ಮಾಡುತ್ತಿರುವ ವರ್ಕೌಟ್ ವಿಡಿಯೋ ಇಂಟರ್ ನೆಟ್ ನಲ್ಲಿ ಸಖತ್ ವೈರಲ್ ಆಗಿದೆ ಮುಂಬೈ: ಬಾಲಿವುಡ್ ನಟಿ ರಾಧಿಕಾ ಮದನ್ ಈಜುಕೋಳದಲ್ಲಿ ಮಾಡುತ್ತಿರುವ ವರ್ಕೌಟ್ ವಿಡಿಯೋ ಇಂಟರ್ ನೆಟ್ ನಲ್ಲಿ ಸಖತ್ ವೈರಲ್ ಆಗಿದೆ.ನಾಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಈ ಸಂದರ್ಭದಲ್ಲಿ ಚಿತ್ರರಂಗದ ಪ್ರಮುಖ ನಟ, ನಟಿಯರು ತಮ್ಮ ಫೋಟೋ ಹಂಚಿಕೊಳ್ಳುವ ಮೂಲಕ ತಾವೂ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಿ ಎನ್ನುವ ಸಂದೇಶವನ್ನು ಜನರಿಗೆ ನೀಡುತ್ತಿದ್ದಾರೆ.ಇದೇ ಸಂದರ್ಭದಲ್ಲಿ ಈಜುಕೋಳದಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವೊಂದನ್ನು ನಟಿ ರಾಧಿಕಾ ಮದನ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ವರ್ಕೌಟ್ ಮಿಸ್ ಮಾಡಲ್ಲ ಎಂಬ ಅಡಿಬರಹ ನೀಡಿ ರಾಧಿಕಾ ಮದನ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. (@) (@)