ಆಸ್ಕರ್ ರೇಸ್ ನಲ್ಲಿ ಮತ್ತೆ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಭಾರತೀಯ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಹೆಸರು ಮತ್ತೆ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಸೇರಿದೆ. ಪೀಲೆ: ಬರ್ತ್ ಆಫ್ ಲೆಜೆಂಡ್ ಸಿನಿಮಾಗೆ ನೀಡಿರುವ... ಲಾಸ್ ಏಂಜಲೀಸ್: ಭಾರತೀಯ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಹೆಸರು ಮತ್ತೆ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಸೇರಿದೆ. ಪೀಲೆ: ಬರ್ತ್ ಆಫ್ ಲೆಜೆಂಡ್ ಸಿನಿಮಾಗೆ ನೀಡಿರುವ ಸಂಗೀತಕ್ಕಾಗಿ ರೆಹಮಾನ್ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ 2009 ರಲ್ಲಿ ಸ್ಲಮ್ ಡಾಗ್ ಮಿಲಿಯನೇರ್ ಎಂಬ ಚಿತ್ರಕ್ಕಾಗಿ ರೆಹಮಾನ್ ಅಸ್ಕರ್ ಪ್ರಶಸ್ತಿ ಪಡೆದಿದ್ದರು. ಎರಡನೇ ಬಾರಿಗೆ ಮತ್ತೆ ರೆಹಮಾನ್ ಹೆಸರು ಕೇಳಿ ಬಂದಿದೆ. 89ನೇ ಅಕಾಡೆಮಿ ಪ್ರಶಸ್ತಿ ಸಾಲಿನಲ್ಲಿ 145 ಮಂದಿ ನಾಮ ನಿರ್ದೇಶನದಲ್ಲಿ ಮೂಲ ಹಾಡುಗಳ ವಿಭಾಗದಲ್ಲಿ ರೆಹಮಾನ್ ಹೆಸರು ಕೂಡ ನಾಮ ನಿರ್ದೇಶನಗೊಂಡಿದೆ. ಜನವರಿ 24 ರಂದು ನಡೆಯುವ ಕಾರ್ಯಕ್ರಮದಲ್ಲಿ ಅಂತಿಮ ನಾಮನಿರ್ದೇಶನ ನಡೆಯುವುದು.ಫೆಬ್ರವರಿ 26 ರಂದು ಹೈಲ್ಯಾಂಡ್ ಹಾಲಿವುಡ್ ಸೆಂಟರ್ ನ ಡೋಲ್ಬಿ ಥಿಯೇಟರ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.