ಬಾಕ್ಸ್ ಆಫೀಸ್‍ನಲ್ಲಿ ಗಬ್ಬರ್ ಕಮಾಲ್ ಅಕ್ಷಯ್ ಕುಮಾರ್ ನಟನೆಯ ಬಾಲಿವುಡ್ ನ ಬಹುನಿರೀಕ್ಷಿತ ಗಬ್ಬರ್ ಇಸ್ ಬ್ಯಾಕ್ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ದೂಳೆಬ್ಬಿಸುತ್ತಿದೆ. ಅಕ್ಷಯ್ ಕುಮಾರ್ ನಟನೆಯ ಬಾಲಿವುಡ್ ನ ಬಹುನಿರೀಕ್ಷಿತ ಗಬ್ಬರ್ ಇಸ್ ಬ್ಯಾಕ್ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ದೂಳೆಬ್ಬಿಸುತ್ತಿದೆ. 2015ರ ಶುರುವಿನಲ್ಲಿ ಸ್ಟಾರ್ ಹೀರೋಗಳ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಬಿಡುಗಡೆಯಾದ ಕೆಲ ಚಿತ್ರಗಳು ಹೇಳಿಕೊಳ್ಳುವಂತಾ ಕಲೆಕ್ಷನ್ ಮಾಡಿರಲಿಲ್ಲ. ಕಳೆಗುಂದಿದ್ದ ಬಾಲಿವುಡ್ ಇಂಡಸ್ಟ್ರಿಗೆ ಗಬ್ಬರ್ ಸಿನಿಮಾದ ಕಲೆಕ್ಷನ್ ನವ ಉತ್ಸಾಹ ನೀಡಿದೆ. ಕಳೆದ ಶುಕ್ರವಾರ ತೆರೆ ಕಂಡ ಗಬ್ಬರ್ ಇಸ್ ಬ್ಯಾಕ್ ಚಿತ್ರ ಮೊದಲ ದಿನ 13.05 ಕೋಟಿ, ಶನಿವಾರ 11.35 ಕೋಟಿ ಹಾಗೂ ಭಾನುವಾರ 14.10 ರುಪಾಯಿ ಗಳಿಗೆ ಮಾಡುವ ಮೂಲಕ ಮೂರು ದಿನಗಳಲ್ಲಿ ಒಟ್ಟಾರೆ 39.50 ಕೋಟಿ ಕಲೆಕ್ಷನ್ ಮಾಡಿದೆ. ಗಬ್ಬರ್ ಹವಾ ನೋಡುತ್ತಿದ್ದರೆ ಒಂದು ವಾರದಲ್ಲಿ 60 ಕೋಟಿ ರುಪಾಯಿ ದಾಟುವ ಲಕ್ಷಣಗಳು ಕಾಣುತ್ತಿವೆ. ಗಬ್ಬರ್ ಇಸ್ ಬ್ಯಾಕ್ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದರು. ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಗಬ್ಬರ್ ಇಸ್ ಬ್ಯಾಕ್ ಚಿತ್ರ 2002ರಲ್ಲಿ ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶಿಸಿದ್ದ ತಮಿಳಿನ ಬ್ಯಾಕ್ ಬಸ್ಟರ್ ಚಿತ್ರ ರಮಣ ಚಿತ್ರದ ರಿಮೇಕ್. ತಮಿಳಿನಲ್ಲಿ ವಿಜಯ್ ಕಾಂತ್ ಮಾಡಿದ್ದ ಪಾತ್ರವನ್ನೇ ಗಬ್ಬರ್ ಇಸ್ ಬ್ಯಾಕ್ ನಲ್ಲಿ ಅಕ್ಷಯ್ ಕುಮಾರ್ ನಿರ್ವಹಿಸಿದ್ದಾರೆ. ಗಬ್ಬರ್ ಇಸ್ ಬ್ಯಾಕ್ ಚಿತ್ರದಲ್ಲಿ ಶೃತಿ ಹಾಸನ್, ಸುಮನ್ ತಲ್ವಾರ್, ಸುನೀಲ್ ಗ್ರೋವರ್ ಮತ್ತು ಜೈದೀಪ್ ಮುಖ್ಯ ಭೂಮಿಕೆಯಲ್ಲಿದ್ದಾರೆ.