ನಾನಿನ್ನೂ ಸತ್ತಿಲ್ಲ, ನೀವೆಲ್ಲಾ ಹೇಳುವಷ್ಟು ಮುದುಕಿಯೂ ಆಗಿಲ್ಲ: ವದಂತಿಗಳಿಗೆ ಬಾಲಿವುಡ್ ನಟಿ ಮುಮ್ತಾಜ್ ತಿರುಗೇಟು ಬಾಲಿವುಡ್ ನ ಹಿರಿಯ ನಟಿ ಮುಮ್ತಾಜ್ ಸಾವಿನ ಕುರಿತಾಗಿ ಹರಡಿದ್ದ ವದಂತಿಗಳಿಗೆ ಈಗ ಸ್ವತಃ ಮುಮ್ತಾಜ್ ಅವರೇ ವೀಡಿಯೋವೊಂದರಲ್ಲಿ ಕಾಣಸಿಕೊಂಡು ತಾವು ಸತ್ತಿಲ್ಲ, ಇನ್ನು ಜೀವಂತವಾಗಿರುವುದಾಗಿ ಹೇಳಿದ್ದಾರೆ. ನವದೆಹಲಿ: ಬಾಲಿವುಡ್ ನ ಹಿರಿಯ ನಟಿ ಮುಮ್ತಾಜ್ ಸಾವಿನ ಕುರಿತಾಗಿ ಹರಡಿದ್ದ ವದಂತಿಗಳಿಗೆ ಈಗ ಸ್ವತಃ ಮುಮ್ತಾಜ್ ಅವರೇ ವೀಡಿಯೋವೊಂದರಲ್ಲಿ ಕಾಣಸಿಕೊಂಡು ತಾವು ಸತ್ತಿಲ್ಲ, ಇನ್ನು ಜೀವಂತವಾಗಿರುವುದಾಗಿ ಹೇಳಿದ್ದಾರೆ.1960 ಮತ್ತು 70ರ ದಶಕದಲ್ಲಿ ಬಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರು ಮುಮ್ತಾಜ್‌. ರಾಜೇಶ್‌ ಖನ್ನಾ, ಧರ್ಮೇಂದ್ರ, ಮನೋಜ್‌ ಕುಮಾರ್‌, ಶಶಿ ಕಪೂರ್‌, ದಿಲೀಪ್‌ ಕುಮಾರ್‌, ಸುನಿಲ್‌ ದತ್‌ ಮುಂತಾದ ಸ್ಟಾರ್‌ ಹೀರೋಗಳ ಜೊತೆ ತೆರೆಹಂಚಿಕೊಳ್ಳುವ ಮೂಲಕ ಅವರು ಫೇಮಸ್‌ ಆಗಿದ್ದರು. ಮುಮ್ತಾಜ್‌ ನಿಧನರಾಗಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಅದರ ಜೊತೆಗೆ ಒಂದು ಫೋಟೋ ಕೂಡ ವೈರಲ್‌ ಆಯಿತು. ಆ ಬಗ್ಗೆ ಖಡಕ್‌ ಆಗಿಯೇ ಮುಮ್ತಾಜ್‌ ಪ್ರತಿಕ್ರಿಯೆ ನೀಡಿದ್ದಾರೆ. ಮುಮ್ತಾಜ್ ತನ್ನ ವೀಡಿಯೊದಲ್ಲಿ 'ನಾನು ಸತ್ತಿಲ್ಲ, ನಾನು ಜೀವಂತವಾಗಿದ್ದೇನೆ' ಈ ವದಂತಿಗಳನ್ನು ನಂಬಬೇಡಿ ಎಂದು ಹೇಳಿರುವ ವಿಡಿಯೋವನ್ನು ಮಗಳು ಪೋಸ್ಟ್ ಮಾಡಿದ್ದಾರೆ.ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮುಮ್ತಾಜ್‌ ಫಿಲ್ಮೀ ಸ್ಟೈಲ್‌ನಲ್ಲಿಯೇ ಮಾತನಾಡಿದ್ದಾರೆ. 'ಹಾಯ್‌, ನನ್ನೆಲ್ಲ ಅಭಿಮಾನಿಗಳೇ. ಐ ಲವ್‌ ಯೂ. ನೋಡಿ... ನಾನಿನ್ನೂ ಸತ್ತಿಲ್ಲ. ಜೀವಂತವಾಗಿದ್ದೇನೆ. ಜನರು ಹೇಳುವಷ್ಟು ಮುದುಕಿಯೂ ಆಗಿಲ್ಲ. ನಿಮ್ಮೆಲ್ಲರ ಹಾರೈಕೆಯಿಂದ ಈಗಲೂ ಸುಂದರವಾಗಿ ಕಾಣುತ್ತಿದ್ದೇನೆ' ಎಂದಿದ್ದಾರೆ. ಈ ವಿಡಿಯೋವನ್ನು ಮುಮ್ತಾಜ್‌ ಪುತ್ರಿ ತಾನ್ಯಾ ಮಾಧವಿ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮಾಡಿದ್ದಾರೆ. ! ! ! . ! 73 ! (@) 22, 2020 2:08am