ನಟ ಸಲ್ಮಾನ್ ಖಾನ್ ಜೊತೆ ಕಿಸ್ಸಿಂಗ್ ಸೀನ್ ಮಾಡುವುದಿಲ್ಲವೆಂದು ಅತ್ತಿದ್ದ ನಟಿ ಭಾಗ್ಯಶ್ರೀ: ಸೂಪರ್ ಐಡಿಯ ಮಾಡಿದ ನಿರ್ದೇಶಕರು ತಾನು ಕಿಸ್ ಮಾಡುವುದಿಲ್ಲ ಎಂದು ನಟಿ ಭಾಗ್ಯಶ್ರೀ ಒಂದೇ ಸಮನೆ ಹಠ ಮಾಡಿ ಕೂತು ಬಿಟ್ಟಿದ್ದರು. ಕೋಲು ಮುರಿಯಬಾರದು, ಹಾವೂ ಸಾಯಬಾರದು ಎನ್ನುವಂತೆ ನಿರ್ದೇಶಕ ಸೂರಜ್ ಬಜ್ರಾತಿಯ ಒಂದು ಸೂಪರ್ ಐಡಿಯಾ ಮಾಡಿ ಕಿಸ್ಸಿಂಗ್ ಸೀನ್ ಶೂಟ್ ಮಾಡಿಯೇ ಬಿಟ್ಟರು. ಮುಂಬೈ: 'ಮೈನೇ ಪ್ಯಾರ್ ಕಿಯಾ', ಸಲ್ಮಾನ್ ಖಾನ್ ರನ್ನು ಬಾಲಿವುಡ್ ನಲ್ಲಿ ತಳವೂರುವಂತೆ ಮಾಡಿದ ಸಿನಿಮಾ. 1989ರಲ್ಲಿ ತೆರೆಕಂಡಿದ್ದ ಆ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ಜೋಡಿಯಾಗಿ ಭಾಗ್ಯಶ್ರೀ ನಟಿಸಿದ್ದರು. ಆ ಸಿನಿಮಾ ಚಿತ್ರೀಕರಣ ವೇಳೆ ನಡೆದ ಸ್ವಾರಸ್ಯಕರ ಸಂಗತಿಯನ್ನು ಅವರೀಗ ಬಹಿರಂಗಪಡಿಸಿದ್ದಾರೆ. ಸಿನಿಮಾದಲ್ಲಿ ಸಲ್ಮಾನ್ ಮತ್ತು ಭಾಗ್ಯಶ್ರೀ ಕಿಸ್ ಮಾಡುವ ದೃಶ್ಯವಿತ್ತು. ಈ ವಿಷಯ ತಿಳಿಯುತ್ತಲೇ ಭಾಗ್ಯಶ್ರೀ ಅಳಲು ಶುರುಮಾಡಿದ್ದರು. ತಾನು ಕಿಸ್ ಮಾಡುವುದಿಲ್ಲ ಎಂದು ನಟಿ ಒಂದೇ ಸಮನೆ ಹಠ ಮಾಡಿ ಕೂತು ಬಿಟ್ಟಿದ್ದರು. ಭಾಗ್ಯಶ್ರೀ ಅವರನ್ನು ಕಂಡು ನಿರ್ದೇಶಕರು ತಲೆ ಮೇಲೆ ಕೈಹೊತ್ತು ಕೂತರು. ಕೋಲು ಮುರಿಯಬಾರದು, ಹಾವೂ ಸಾಯಬಾರದು ಎನ್ನುವಂತೆ ನಿರ್ದೇಶಕ ಸೂರಜ್ ಬಜ್ರಾತಿಯ ಒಂದು ಸೂಪರ್ ಐಡಿಯಾ ಮಾಡಿದರು.ನಂತರ ಬೇರೆ ದಾರಿ ಕಾಣದೆ ನಿರ್ದೇಶಕರು ಸಲ್ಮಾನ್ ಮತ್ತು ಭಾಗ್ಯಶ್ರೀ ನಡುವೆ ಗ್ಲಾಸ್ ಪೀಸ್ ಇಟ್ಟು ಕಿಸ್ ಮಾಡಿಸಿ ಆ ದೃಶ್ಯವನ್ನು ಶೂಟ್ ಮಾಡಿದರು. ಆಗಿನ್ನೂ ತಮಗೆ 18 ವರ್ಷ. ಆ ಸಮಯದಲ್ಲಿ ತಾವು ಲವ್ ಮಾಡುತ್ತಿದ್ದರೂ ಅದುವರೆಗೂ ಯಾವುದೇ ವ್ಯಕ್ತಿಯನ್ನು ಕಿಸ್ ಮಾಡಿರಲಿಲ್ಲ. ಮದುವೆ ಮಾಡಿಕೊಂಡು ಚೆನ್ನಾಗಿ ಬಾಳಿ ಬದುಕಬೇಕು ಅಂದುಕೊಂಡಿದ್ದೆ. ಹೀಗಾಗಿ ಕಿಸ್ಸಿಂಗ್ ಸೀನ್ ನಿರಾಕರಿಸಿದ್ದಾಗಿ ಅವರೀಗ ಸ್ಪಷ್ಟನೆ ನೀಡಿದ್ದಾರೆ.ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಶೂಟಿಂಗ್‌ ನಲ್ಲಿ ಗಾಯ!ಭಾರತೀಯ ವಾಯುಪಡೆ ಪೈಲಟ್ ಸಮವಸ್ತ್ರದಲ್ಲಿ ಮಿಂಚಿದ ಬಾಲಿವುಡ್ ನಟಿ ಕಂಗನಾಡ್ರಗ್ಸ್ ಕೇಸ್: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನಅಶ್ಲೀಲ ಚಿತ್ರ ಪ್ರಕರಣ: ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಸಮನ್ಸ್!