'ಬಾಜಿಗರ್', 'ಹಮ್ ಆಪ್ಕೆ ಹೈ ಕೌನ್' ಚಿತ್ರಗಳ ಗೀತರಚನೆಕಾರ ದೇವ್ ಕೊಹ್ಲಿ ನಿಧನ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಬಾಲಿವುಡ್ ಖ್ಯಾತ ಗೀತ ರಚನೆಕಾರ ಹಾಗೂ ಕವಿ ದೇವ್ ಕೊಹ್ಲಿ ಅವರು ಶನಿವಾರ ಬೆಳಗ್ಗೆ ನಿಧನರಾದರು ಎಂದು ಅವರ ವಕ್ತಾರರು ತಿಳಿಸಿದ್ದಾರೆ. ಮುಂಬೈ: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಬಾಲಿವುಡ್ ಖ್ಯಾತ ಗೀತ ರಚನೆಕಾರ ಹಾಗೂ ಕವಿ ದೇವ್ ಕೊಹ್ಲಿ ಅವರು ಶನಿವಾರ ಬೆಳಗ್ಗೆ ನಿಧನರಾದರು ಎಂದು ಅವರ ವಕ್ತಾರರು ತಿಳಿಸಿದ್ದಾರೆ.ಬಾಜಿಗರ್ ಮತ್ತು ಹಮ್ ಆಪ್ಕೆ ಹೈ ಕೌನ್ ಸೇರಿದಂತೆ 100ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಿಗೆ ಗೀತರಚನೆ ಮಾಡಿದ್ದ ದೇವ್ ಕೊಹ್ಲಿ ಅವರಿಗೆ 81 ವರ್ಷ ವಯಸ್ಸಾಗಿತ್ತು.ಇದನ್ನು ಓದಿ: ಬಾಲಿವುಡ್ ನಟ ಸೋನು ಸೂದ್ ಸಹಾಯದಿಂದ ಪೈಲಟ್ ಆದ ಯುವಕ! ಇದೀಗ ಆ ಒಂದು ಕ್ಷಣಕ್ಕಾಗಿ ಕಾತುರ.. ವಯೋಸಹಜ ಸಮಸ್ಯೆಗಳಿಂದಾಗಿ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಹ್ಲಿ ಅವರನ್ನು ಕೆಲ ದಿನಗಳ ಹಿಂದೆ ಅಂಧೇರಿಯ ಮನೆಗೆ ಕರೆತರಲಾಗಿತ್ತು."ಕೊಹ್ಲಿ ಅವರು ಸುಮಾರು ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. 10 ದಿನಗಳ ಹಿಂದೆ ಅವರನ್ನು ಮನೆಗೆ ಕರೆತರಲಾಯಿತು. ಇಂದು ಬೆಳಗ್ಗೆ ಅಂಧೇರಿಯಲ್ಲಿರುವ ಅವರ ನಿವಾಸದಲ್ಲಿ ವಯೋಸಹಜ ಸಮಸ್ಯೆಗಳಿಂದ ನಿಧನರಾದರು" ಎಂದು ಕೊಹ್ಲಿಯ ವಕ್ತಾರ ಪ್ರೀತಮ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.ಮುಂಬೈನ ಉಪನಗರದಲ್ಲಿರುವ ಓಶಿವಾರಾ ಸ್ಮಶಾನದಲ್ಲಿ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನೆರವೇರಿದೆ.ಕೊಹ್ಲಿ ಅವರು ಪಾಕಿಸ್ತಾನದಲ್ಲಿ ಜನಿಸಿದರು ಮತ್ತು 1948 ರಲ್ಲಿ ದೇಶ ವಿಭಜನೆಯ ನಂತರ ಅವರ ಕುಟುಂಬ ಡೆಹ್ರಾಡೂನ್ ಗೆ ಬಂದು ನೆಲೆಸಿತ್ತು.1964 ರಲ್ಲಿ ಉದ್ಯೋಗ ಅರಸಿ ಮುಂಬೈಗೆ ಆಗಮಿಸಿದ ಕೊಹ್ಲಿ ಅವರು1969 ರಲ್ಲಿ ಗುಂಡ ಚಿತ್ರದ ಮೂಲಕ ಗೀತರಚನೆಕಾರರಾಗಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು.