: ಶಾರುಖ್ ಖಾನ್ ಜನ್ಮದಿನಕ್ಕೆ 'ಡಂಕಿ' ಟೀಸರ್ ಔಟ್, ರಾಜ್‌ಕುಮಾರ್ ಹಿರಾನಿ ಮತ್ತೆ ಮ್ಯಾಜಿಕ್! ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಡಂಕಿ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದ್ದು, 3 ಈಡಿಯಟ್ಸ್ ಖ್ಯಾತಿಯ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರ ವಲಸಿಗರ ಕುರಿತ ಕಥಾ ಹಂದರವನ್ನು ಒಳಗೊಂಡಿದೆ. ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಡಂಕಿ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದ್ದು, 3 ಈಡಿಯಟ್ಸ್ ಖ್ಯಾತಿಯ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರ ವಲಸಿಗರ ಕುರಿತ ಕಥಾ ಹಂದರವನ್ನು ಒಳಗೊಂಡಿದೆ.ಶಾರುಖ್ ಖಾನ್ ಅವರ ಜನ್ಮದಿನದ ನಿಮಿತ್ತ ಡಂಕಿ ಚಿತ್ರದ ಟೀಸರ್ ಅನಾವರಣಗೊಳಿಸಲಾಗಿದೆ. ಚಿತ್ರ ತಯಾರಕರು ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮುಖೇನ ಶಾರುಖ್ ಖಾನ್ ಜನ್ಮದಿನವನ್ನು ವಿಶೇಷವಾಗಿಸಿದ್ದಾರೆ.2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ 'ಡಂಕಿ' ಟೀಸರ್ ಬಿಡುಗಡೆಗೆ ಚಿತ್ರತಯಾರಕರು ವಿಶೇಷ ಸಂದರ್ಭಕ್ಕಾಗಿ ಕಾದಿದ್ದರು. ಇದೀಗ ಶಾರುಖ್ ಖಾನ್ ಜನ್ಮ ದಿನದಂದೇ ಡಂಕಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ.ಇದನ್ನೂ ಓದಿ: ಶಾರುಖ್ ಖಾನ್ ನಟನೆಯ ಬ್ಲಾಕ್ ಬಸ್ಟರ್ 'ಜವಾನ್' ಚಿತ್ರದ ಒಟಿಟಿ ಬಿಡುಗಡೆ ಡೇಟ್ ಫಿಕ್ಸ್!ಅಂದಹಾಗ ಚಿತ್ರದ ತಂಡ ಟೀಸರ್ ಅನ್ನು 2 ಭಾಗಗಳಲ್ಲಿ ರಿಲೀಸ್ ಮಾಡಲು ಸಿದ್ಧವಾಗಿದ್ದು, ಈ ಪೈಕಿ ಈಗ ಮೊದಲ ಟೀಸರ್ ಮಾತ್ರ ಬಿಡುಗಡೆಯಾಗಿದೆ. ರಾಜ್ ಕುಮಾರ್ ಹಿರಾನಿ ನಿರ್ದೇಶನದ ಚಿತ್ರವನ್ನು ಶಾರುಖ್ ಖಾನ್ ಅವರ ಬ್ಯಾನರ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ತಾಪ್ಸಿ ಪನ್ನು ಎಸ್ಆರ್ಕೆ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು, ವಿಶೇಷ ಪಾತ್ರಗಳಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ.