ನಟ ಸುಶಾಂತ್ ಸಿಂಗ್ ಸಾವು ಪ್ರಕರಣ: ಎನ್‌ಸಿಬಿ ಆರೋಪ ಪಟ್ಟಿಯಲ್ಲಿ ನಟಿ ರಿಯಾ ಚಕ್ರವರ್ತಿ ಪ್ರಮುಖ ಆರೋಪಿ! 2020ರಲ್ಲಿ ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಅವರು ಡ್ರಗ್ಸ್ ಖರೀದಿಸಿದ್ದಾರೆ ಎಂದು ದೇಶದ ಡ್ರಗ್ಸ್ ವಿರೋಧಿ ಸಂಸ್ಥೆ ಆರೋಪ ಮಾಡಿದೆ. ಮುಂಬೈ: 2020ರಲ್ಲಿ ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಅವರು ಡ್ರಗ್ಸ್ ಖರೀದಿಸಿದ್ದಾರೆ ಎಂದು ದೇಶದ ಡ್ರಗ್ಸ್ ವಿರೋಧಿ ಸಂಸ್ಥೆ ಆರೋಪ ಮಾಡಿದೆ.ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಸಲ್ಲಿಸಿದ ಆರೋಪಪಟ್ಟಿಯಲ್ಲಿ ರಿಯಾ ಚಕ್ರವರ್ತಿ ಮತ್ತು ಇತರ 34 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ತಪ್ಪಿತಸ್ಥರೆಂದು ಸಾಬೀತಾದರೆ, ರಿಯಾ ಚಕ್ರವರ್ತಿ 10 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.ರಿಯಾ ಚಕ್ರವರ್ತಿ ಅವರುಸಣ್ಣ ಪ್ರಮಾಣದ ಡ್ರಗ್ಸ್ ಖರೀದಿಗೆ ಹೆಚ್ಚು ಹಣ ನೀಡಿದ್ದಾರೆ ಎಂಬ ಆರೋಪ ಅವರ ಮೇಲಿದ್ದು, ಆಕೆಯ ಸಹೋದರ ಶೋಕ್ ಚಕ್ರವರ್ತಿಯನ್ನೂ ಆರೋಪಿ ಎಂದು ಹೆಸರಿಸಲಾಗಿದೆ.ಇದನ್ನೂ ಓದಿ: ನಟ ಸುಶಾಂತ್ ಸಿಂಗ್ ಪ್ರಕರಣ: ರಿಯಾ ಸೇರಿ 33 ಮಂದಿ ವಿರುದ್ಧ 12 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎನ್‌ಸಿಬಿಆಕೆ ಸುಶಾಂತ್ ಸಿಂಗ್‌ಗೆ ಗಾಂಜಾವನ್ನು ಪಡೆದು ತಲುಪಿಸಿದ್ದಾಳೆ. ಅವನ ಪರವಾಗಿ ರಿಯಾ ಅದಕ್ಕೆ ಪಾವತಿಯನ್ನೂ ಮಾಡಿದಳು ಎಂದು ಎನ್‌ಸಿಬಿ ಹೇಳಿದೆ. ಚಕ್ರವರ್ತಿ ಅವರನ್ನು 2020ರ ಸೆಪ್ಟೆಂಬರ್ ಈ ಪ್ರಕರಣದಲ್ಲಿ ಬಂಧಿಸಲಾಯಿತು. ಆಕೆಯನ್ನು ಬಂಧಿಸಿದ ಸುಮಾರು ಒಂದು ತಿಂಗಳ ನಂತರ ಬಾಂಬೈ ಹೈಕೋರ್ಟ್‌ ಜಾಮೀನು ನೀಡಿತ್ತು.2020ರಂದು ಜೂನ್ 14 ಮುಂಬೈನ ಬಾಂದ್ರಾದಲ್ಲಿನ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾದ ನಟ ಸುಶಾಂತ್ ಸಿಂಗ್ ಸಾವಿನ ನಂತರ ಎನ್ ಸಿಬಿ ಬಾಲಿವುಡ್ ಮತ್ತು ದೂರದರ್ಶನ ಉದ್ಯಮದಲ್ಲಿ ಡ್ರಗ್ಸ್ ಬಳಕೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿತು.