ಕಿರುತೆರೆ ನಟಿ ದೀಪಿಕಾ ಕಾಕರ್ ಗೆ 'ಬಿಗ್ ಬಾಸ್ 12' ಕಿರೀಟ, ಶ್ರೀಶಾಂತ್ ರನ್ನರ್ ಅಪ್ ಟಿವಿ ನಿರೂಪಕಿ ದೀಪಿಕಾ ಕಾಕರ್ ಹಿಂದಿ ಬಿಗ್ ಬಾಸ್ ಸೀಸನ್ 12ರ ವಿಜೇತೆಯಾಗಿದ್ದಾರೆ... ಟಿವಿ ನಿರೂಪಕಿ ದೀಪಿಕಾ ಕಾಕರ್ ಹಿಂದಿ ಬಿಗ್ ಬಾಸ್ ಸೀಸನ್ 12ರ ವಿಜೇತೆಯಾಗಿದ್ದಾರೆ. ಬಿಗ್ ಬಾಸ್ ಸೀಸನ್ 12ರ ಟ್ರೋಫಿ ಮತ್ತು 30 ಲಕ್ಷ ರೂಪಾಯಿ ನಗದನ್ನು ದೀಪಿಕಾ ಪಡೆದರೆ, ಮಾಜಿ ಕ್ರಿಕೆಟಿಗ ಶ್ರೀಶಾಂತ್ ರನ್ನರ್ ಅಪ್ ಆಗಿದ್ದಾರೆ. ದೀಪಿಕಾ ಹಿಂದಿಯ ಸಸುರಾಲ್ ಸಿಮರ್ ಕಾ ಧಾರಾವಾಹಿಯಲ್ಲಿ ಸಿಮರ್ ಭಾರದ್ವಾಜ್ ಪಾತ್ರ ನಿರ್ವಹಿಸಿದ್ದಾರೆ. ಅಂತಿಮ ಹಣಾಹಣಿಯಲ್ಲಿ ರೋಮಿಲ್ ಚೌಧರಿ, ಕರನ್ವೀರ್ ಬೊಹ್ರಾ ಮತ್ತು ದೀಪಕ್ ಠಾಕೂರ್ ಕೂಡ ಇದ್ದರು. ನಿರೂಪಕ ಸಲ್ಮಾನ್ ಖಾನ್ ಅಂತಿಮವಾಗಿ ಸ್ಪರ್ಧೆಯಲ್ಲುಳಿದ ದೀಪಿಕಾ, ಶ್ರೀಶಾಂತ್ ಮತ್ತು ದೀಪಕ್ ಅವರಲ್ಲಿ ಒಬ್ಬರಿಗೆ 20 ಲಕ್ಷ ರೂಪಾಯಿ ಪಡೆದು ಸ್ಪರ್ಧೆಯಿಂದ ನಿರ್ಗಮಿಸಲು ಅವಕಾಶ ನೀಡಿದ್ದರು. ದೀಪಕ್ 20 ಲಕ್ಷ ರೂಪಾಯಿ ಪಡೆದು ನಿರ್ಗಮಿಸಿದರು. ಗ್ರಾಂಡ್ ಫಿನಾಲೆಯಲ್ಲಿ ಸಲ್ಮಾನ್ ಖಾನ್ ಜೊತೆಗೆ ಕ್ರಿಕೆಟಿಗ ಶ್ರೀಶಾಂತ್ ಮತ್ತು ದೀಪಿಕಾ ಕೂಡ ಹಿಂದಿ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಿದರು. #BB12 @ms_dipika.#BB12GrandeFinale #BiggBoss12Finale ../HpBdq4nfnd