ದೌರ್ಜನ್ಯ ಪ್ರಕರಣದಲ್ಲಿ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿಗೆ ಉತ್ತರ ಪ್ರದೇಶ ಕೋರ್ಟ್ ಸಮನ್ಸ್ ನಟ ಮತ್ತು ಅವರ ಕುಟುಂಬದ ವಿರುದ್ಧ ದಾಖಲಾಗಿರುವ ಕಿರುಕುಳ ಪ್ರಕರಣದಲ್ಲಿ ಅಕ್ಟೋಬರ್ 7ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿಗೆ ವಿಶೇಷ ಪೋಕ್ಸೊ ನ್ಯಾಯಾಲಯ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಲಖನೌ: ನಟ ಮತ್ತು ಅವರ ಕುಟುಂಬದ ವಿರುದ್ಧ ದಾಖಲಾಗಿರುವ ಕಿರುಕುಳ ಪ್ರಕರಣದಲ್ಲಿ ಅಕ್ಟೋಬರ್ 7ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿಗೆ ವಿಶೇಷ ಪೋಕ್ಸೊ ನ್ಯಾಯಾಲಯ ಮಂಗಳವಾರ ನೋಟಿಸ್ ಜಾರಿ ಮಾಡಿದೆ.ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶ ರಿತೇಶ್ ಸಚ್‌ದೇವ ಅವರು ನವಾಜುದ್ದೀನ್ ಸಿದ್ದಿಕಿ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸರು ಅಂತಿಮ ವರದಿಯನ್ನು ಸಲ್ಲಿಸಿದ ನಂತರ ಉತ್ತರಿಸಲು ಹಾಜರಾಗುವಂತೆ ದೂರುದಾರರಾದ ಆಲಿಯಾ ಸಿದ್ದಿಕಿ ಅವರನ್ನು ಕೇಳಿದ್ದಾರೆ.ದೌರ್ಜನ್ಯ ಪ್ರಕರಣದಲ್ಲಿ ನವಾಜುದ್ದೀನ್ ಸಿದ್ದಿಕಿ ಸೇರಿದಂತೆ ಐವರು ಆರೋಪಿಗಳಿಗೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಸರ್ಕಾರಿ ವಕೀಲ ಪ್ರದೀಪ್ ಬಲಿಯಾನ್ ತಿಳಿಸಿದ್ದಾರೆ.ಇದನ್ನೂ ಓದಿ: ಮಾಜಿ ಪತ್ನಿ, ಸಹೋದರನ ವಿರುದ್ಧ ನವಾಜುದ್ದೀನ್ ಸಿದ್ದಿಕಿ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲುಪ್ರಾಸಿಕ್ಯೂಷನ್ ಪ್ರಕಾರ, ನವಾಜುದ್ದೀನ್ ಅವರ ಸಹೋದರ ಮಿನಾಜುದ್ದೀನ್ 2012ರಲ್ಲಿ ಕುಟುಂಬದ ಅಪ್ರಾಪ್ತ ಸದಸ್ಯರಿಗೆ ಕಿರುಕುಳ ನೀಡಿದ್ದರು. ಇದಕ್ಕೆ ಇತರರು ಬೆಂಬಲಿಸಿದರು ಎಂದು ಆರೋಪಿಸಿದೆ.ಈ ಸಂಬಂಧ ಮುಂಬೈನಲ್ಲಿ ಆಲಿಯಾ ಎಫ್‌ಐಆರ್ ದಾಖಲಿಸಿದ್ದರು. ನಂತರ 2020ರಲ್ಲಿ ಅದನ್ನು ಬುಧಾನಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.ತನಿಖೆಯ ನಂತರ ಪೊಲೀಸರು ಈ ಪ್ರಕರಣದಲ್ಲಿ ನವಾಜುದ್ದೀನ್, ಆತನ ತಾಯಿ ಮೆಹರುನಿಸಾ, ಆತನ ಸಹೋದರರಾದ ಫೈಜುದ್ದೀನ್, ಅಯಾಜುದ್ದೀನ್ ಮತ್ತು ಮಿನಾಜುದ್ದೀನ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ.