ಹೀರೋಯಿನ್ ನಂ.2 ಶ್ರದ್ಧಾ ಕಪೂರ್‍ಳನ್ನೇ ಎರಡು ಭಾಗ ಮಾಡಲು ನಿರ್ಧರಿಸಿದಂತಿದೆ ಬಾಲಿವುಡ್. ಶಕುನಗಳಿಂದ ಬಾಲಿವುಡ್ ಕೂಡ ಹೊರತಾಗಿಲ್ಲವಾ ಎಂಬಂತೆ ಆಶಿಕಿ 2 ಚಿತ್ರ ಹಿಟ್ ಆಗಿದ್ದಕ್ಕೆ ಶ್ರದ್ಧಾಳೇ ಕಾರಣ... ಶ್ರದ್ಧಾ ಕಪೂರ್‍ಳನ್ನೇ ಎರಡು ಭಾಗ ಮಾಡಲು ನಿರ್ಧರಿಸಿದಂತಿದೆ ಬಾಲಿವುಡ್. ಶಕುನಗಳಿಂದ ಬಾಲಿವುಡ್ ಕೂಡ ಹೊರತಾಗಿಲ್ಲವಾ ಎಂಬಂತೆ ಆಶಿಕಿ 2 ಚಿತ್ರ ಹಿಟ್ ಆಗಿದ್ದಕ್ಕೆ ಶ್ರದ್ಧಾಳೇ ಕಾರಣ ಎಂದೂ, ಯಾವುದೇ ಚಿತ್ರದ ಸೀಕ್ವೆಲ್ ಅಂದರೆ ಎರಡನೇ ಭಾಗ ಮಾಡೋದಾದ್ರೂ ಅದರಲ್ಲಿ ಶ್ರದ್ಧಾ ನಟಿಸಿದರೇನೇ ಹಿಟ್ ಆಗೋದೆಂದೂ ಬಾಲಿವುಡ್ ನಂಬಿದಂತಿದೆ. ಅದರ ಫಲವಾಗಿ ಶ್ರದ್ಧಾ ಕಪೂರ್‍ಗೆ ಕೈತುಂಬ ಆಫರ್‍ಗಳು ಒದಗುತ್ತಿವೆ. ತಮಾಷೆಯೆಂದರೆ ಆಕೆ ನಟಿಸುವ ಎಲ್ಲ ಚಿತ್ರಗಳ ಹೆಸರು 2 ಅಂಕಿಯಿಂದ ಕೊನೆಗೊಳ್ಳಲಾರಂಭಿಸಿವೆ. ಇದೀಗ ಆಕೆ ಒಪ್ಪಿಕೊಂಡಿರುವ ಎರಡು ಚಿತ್ರಗಳ ಹೆಸರನ್ನೇ ನೋಡಿ. ಎಬಿಸಿಡಿ 2 ಹಾಗೂ ರಾಕ್ ಆನ್ 2 ಚಿತ್ರಗಳಿಗೆ ಶ್ರದ್ಧಾ ನಾಯಕಿ. ಆದರೆ ಇದನ್ನು ಶಕುನವೋ ಇನ್ನೊಂದೋ ಎಂದು ಒಪ್ಪಿಕೊಳ್ಳಲು ಶ್ರದ್ಧಾ ತಯಾರಿಲ್ಲ. `ಈ ಚಿತ್ರದ ಸ್ಕ್ರಿಪ್ಟ್ ಗಳಿಗೆ ನನಗಿಂತ ನ್ಯಾಯ ಒದಗಿಸುವವರು ಇನ್ಯಾರೂ ಇಲ್ಲ. ನನ್ನ ಪ್ರತಿಭೆಗೆ ಸಿಗುತ್ತಿರೋ ಮನ್ನಣೆ' ಅಂದಿದ್ದಾಳೆ ಶ್ರದ್ಧಾ. ತೀನ್ ಪಟ್ಟಿ ಮತ್ತು ಲವ್ ಕಾ ದಿ ಎಂಡ್ ಚಿತ್ರಗಳು ಫ್ಲಾಪ್ ಆದಾಗ ಅವಳ ವೃತ್ತಿಜೀವನವೇ ಎಂಡ್ ಆಯ್ತು ಅಂದುಕೊಂಡವರಿಗೆ ಆಶಿಕೀ 2 ಗೆಲುವಿನ ಮೂಲಕ ಉತ್ತರಿಸಿದ್ದ ಶ್ರದ್ಧಾ ಎಬಿಸಿಡಿ 2 ಚಿತ್ರದಲ್ಲಿ ವರುಣ್ ಧವನ್‍ಗೆ ನಾಯಕಿಯಾಗಿ, ರಾಕ್ ಆನ್ 2 ಚಿತ್ರದಲ್ಲಿ ಫರ್ಹಾನ್ ಅಕ್ತರ್‍ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ.