ಪ್ರಿಯಾಂಕಾ ಚೋಪ್ರಾ 'ವೃತ್ತಿನಿಷ್ಠೆ'ಯನ್ನು ಹೊಂದಿಲ್ಲ; 'ಭಾರತ್' ಚಿತ್ರದ ನಿರ್ಮಾಪಕ ಟೀಕೆ ನಟಿ ಪ್ರಿಯಾಂಕಾ ಚೋಪ್ರಾ ಸಲ್ಮಾನ್ ಖಾನ್ ಜೊತೆಗೆ ಭಾರತ್ ಚಿತ್ರದಲ್ಲಿ ಅಭಿನಯಿಸುತ್ತಾರೆ ಎಂದು ... ನಟಿ ಪ್ರಿಯಾಂಕಾ ಚೋಪ್ರಾ ಸಲ್ಮಾನ್ ಖಾನ್ ಜೊತೆಗೆ ಭಾರತ್ ಚಿತ್ರದಲ್ಲಿ ಅಭಿನಯಿಸುತ್ತಾರೆ ಎಂದು ಸುದ್ದಿಯಾಗಿತ್ತು. ಇದೀಗ ಆ ಚಿತ್ರದಿಂದ ಹೊರಬಂದಿದ್ದಾರೆ ಎಂದು ಮತ್ತೊಂದು ಸುದ್ದಿಯಾಗಿದೆ. ಚಿತ್ರದ ನಿರ್ದೇಶಕ ಆಲಿ ಅಬ್ಬಾಸ್ ಝಫರ್ ಮಾಡಿರುವ ಟ್ವೀಟ್ ನಿಂದ ವಿಷಯ ಬಹಿರಂಗವಾಗಿದೆ. ಪ್ರಿಯಾಂಕಾ ಚೋಪ್ರಾ ವಿಶೇಷ ಕಾರಣಕ್ಕಾಗಿ ಚಿತ್ರದಿಂದ ಹೊರಬಂದಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದರು. ಇನ್ನು ವಿದೇಶಿ ಮಾಧ್ಯಮಗಳಲ್ಲಿ ಪ್ರಿಯಾಂಕಾ ಚೋಪ್ರಾ ತನ್ನ ಗೆಳೆಯ ಪಾಪ್ ಗಾಯಕ ನಿಕ್ ಜೊನಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬುದು ಸುದ್ದಿಯಾಗಿದೆ. ಈ ಎಲ್ಲಾ ಸುದ್ದಿಗಳು ಪ್ರಿಯಾಂಕಾ ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿದೆ. ಭಾರತ್ ಚಿತ್ರದಿಂದ ಹಠಾತ್ತಾಗಿ ಹೊರಬರಲು ನಿರ್ಧರಿಸಿರುವ ಪ್ರಿಯಾಂಕಾ ಬಗ್ಗೆ ಚಿತ್ರದ ಒಬ್ಬ ನಿರ್ಮಾಪಕರು ಬೇಸರ ಹಾಗೂ ಸಿಟ್ಟು ಹೊರಹಾಕಿದ್ದಾರೆ. ರೀಲ್ ಲೈಫ್ ಎಂಟರ್ಟೈನ್ ಮೆಂಟ್ ಸಿಇಒ ನಖಿಲ್ ನಮಿತ್ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿ, ಏಕಾಏಕಿ ಪ್ರಿಯಾಂಕಾ ಚಿತ್ರದಿಂದ ಹೊರಬಂದಿದ್ದು ಬೇಸರ ತರಿಸಿದೆ. ಎರಡು ದಿನಗಳ ಹಿಂದೆ ತಮ್ಮ ನಿಶ್ಚಿತಾರ್ಥದಿಂದಾಗಿ ಚಿತ್ರದಲ್ಲಿ ಅಭಿನಯಿಸಲು ಆಗುವುದಿಲ್ಲ ಎಂದು ಹೇಳಿದರು. ಇದು ಅವರು ವೃತ್ತಿಪರವಲ್ಲ, ಅವರ ನಿಷ್ಠೆಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ಇದೀಗ ಚಿತ್ರದ ನಾಯಕ ಸಲ್ಮಾನ್ ಖಾನ್ ಪ್ರಿಯಾಂಕಾ ಜಾಗಕ್ಕೆ ಬೇರೊಬ್ಬ ನಾಯಕಿಯ ಹುಡುಕಾಟ ಆರಂಭಿಸಿದ್ದಾರಂತೆ. ಕತ್ರಿನಾ ಕೈಫ್ ಅಥವಾ ಜಾಕಲಿನ್ ಫೆರ್ನಾಂಡೀಸ್ ರಲ್ಲಿ ಒಬ್ಬರು ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ... .. .... @Bharat_TheFilm & , ... @ &