ಬಾಲಿವುಡ್ ನಟ ಶಾರುಖ್ ಖಾನ್ 57ನೇ ಹುಟ್ಟುಹಬ್ಬದ ಸಂಭ್ರಮ: ಹರಿದು ಬಂದ ಶುಭಾಶಯಗಳ ಮಹಾಪೂರ ಬಾಲಿವುಡ್‌ ಜನಪ್ರಿಯ ನಟ ಶಾರುಖ್ ಖಾನ್‌ ಅವರು ಇಂದು 57ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಮುಂಬೈ: ಬಾಲಿವುಡ್‌ ಜನಪ್ರಿಯ ನಟ ಶಾರುಖ್ ಖಾನ್‌ ಅವರು ಇಂದು 57ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ.ತಮ್ಮ ನೆಚ್ಚಿನ ನಟನಿಗೆ ಜನ್ಮದಿನದ ಶುಭಾಶಯ ಕೋರಲು ಅಭಿಮಾನಿಗಳು ನಿನ್ನ ಮಧ್ಯೆ ರಾತ್ರಿಯಿಂದ ಅವರ ನಿವಾಸದ ಸುತ್ತ ನೆರೆದಿದ್ದರು. ಹೀಗಾಗಿ ಶಾರೂಖ್ ನಿವಾಸದ ಸುತ್ತ ಪೊಲೀಸರು ವ್ಯಾಪಕ ಬಂದೋಬಸ್ತ್‌ ಮಾಡಿದ್ದರು.ಪ್ರತಿ ವರ್ಷದಂತೆ ಈ ವರ್ಷವೂ ಅವರು ಮನೆಯ ಬಾಲ್ಕನಿಗೆ ಬಂದು ಅಭಿಮಾನಿಗಳಿಗೆ ಕೈಜೋಡಿಸಿ ನಮಸ್ಕರಿಸಿ ಧನ್ಯವಾದ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.ಸಿನಿಮಾರಂಗದ ಗಣ್ಯರು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಅಭಿಮಾನಿಗಳು ಜನ್ಮದಿನದ ಶುಭಾಶಯಗಳನ್ನು ಹೇಳುತ್ತಿದ್ದಾರೆ. ಕಪ್ಪು ಟಿ-ಶರ್ಟ್ ಮತ್ತು ಡೆನಿಮ್ ಧರಿಸಿದ್ದ, ಶಾರುಖ್ ಅಭಿಮಾನಿಗಳ ಕಡೆ ಕೈ ಬೀಸಿದರು, ಫ್ಲೈಯಿಂಗ್ ಕಿಸ್ ನೀಡಿದರು. ಈ ವೇಳೆ ಅವರ ಕಿರಿಯ ಮಗು ಅಬ್ರಾಮ್ ಜೊತೆಗಿದ್ದರು.ಶಾರುಖ್ ಮಧ್ಯರಾತ್ರಿ 12.10-12.15 ರ ಸುಮಾರಿಗೆ ಬಾಲ್ಕನಿಯಲ್ಲಿ ಬಂದು ಸುಮಾರು 15 ನಿಮಿಷಗಳ ಕಾಲ ಅಲ್ಲಿದ್ದರು. ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.