ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಗೆ ಸೆಲೆಬ್ರಿಟಿ ವುಮನ್ ಆಫ್ ದ ಈಯರ್ ಪ್ರಶಸ್ತಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ವರ್ಷದ ಹೆಸರಾಂತ ಮಹಿಳೆ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.... ಮುಂಬಯಿ: ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ವರ್ಷದ ಹೆಸರಾಂತ ಮಹಿಳೆ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಔಟ್ಲುಕ್ ಸಂಸ್ಥೆ ನೀಡುವ ‘ಔಟ್ಸ್ಟ್ಯಾಂಡಿಂಗ್ ಸೆಲೆಬ್ರಿಟಿ ವುಮನ್ ಆಫ್ ದ ಈಯರ್’ ಪ್ರಶಸ್ತಿಗೆ ಐಶ್ವರ್ಯಾ ರೈ ಭಾಜನರಾಗಿದ್ದಾರೆ. ಔಟ್ಲುಕ್ ಬಿಜಿನೆಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 19 ಮಹಿಳಾ ಉದ್ಯಮಿಗಳು ತಮ್ಮ ಔದ್ಯಮಿಕ ಜೀವನ ಹಾಗೂ ಯಶಸ್ಸಿನ ಪ್ರಯಾಣದ ಕುರಿತು ವಿಚಾರಗಳನ್ನು ಮಂಡಿಸಿದರು. 42 ವರ್ಷದ ಐಶ್ವರ್ಯಾ ರೈ ಅವರ ಜೀವನದ ಅತ್ಯಂತ ಸುಮಧುರ ಅನುಭವ ಎಂದರೆ, ಆರಾಧ್ಯ ಬಚ್ಚನ್ ಅಂತೆ. ಹೀಗೆ ತಮ್ಮ ಜೀವನದ ಬಗ್ಗೆ ಮಾತನಾಡುತ್ತ ಅವರು ಇತರ ಮಹಿಳೆಯರಿಗೂ ಪ್ರೇರಣೆಯಾಗಿದ್ದಾರೆ. ಯಶಸ್ಸಿನ ಸೂತ್ರಗಳ ಬಗ್ಗೆ ತಿಳಿಸುತ್ತ, ಮಹಿಳೆಯರು ಪ್ರತಿದಿನ ತಮ್ಮನ್ನು ತಾವು ಉತ್ತಮಪಡಿಸಿಕೊಳ್ಳಲು ಸದಾ ಶ್ರಮಿಸುತ್ತಿರಬೇಕು ಎಂಬ ಕಿವಿಮಾತನ್ನೂ ಹೇಳಿದ್ದಾರೆ.