ಸುಲ್ತಾನ್ ಚಿತ್ರಕ್ಕಾಗಿ ಕುಸ್ತಿ ಕಲಿತ ಅನುಷ್ಕಾ ಬಾಲಿವುಡ್ ನಟ ಸಲ್ಮಾನ್‌ ಖಾನ್‌ ನಟನೆಯ ಸುಲ್ತಾನ್‌ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ಅನುಷ್ಕಾ ಶರ್ಮಾ ಚಿತ್ರಕ್ಕಾಗಿ ಕುಸ್ತಿಯನ್ನು ಕಲಿತ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬಾಲಿವುಡ್ ನಟ ಸಲ್ಮಾನ್‌ ಖಾನ್‌ ನಟನೆಯ ಸುಲ್ತಾನ್‌ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ಅನುಷ್ಕಾ ಶರ್ಮಾ ಚಿತ್ರಕ್ಕಾಗಿ ಕುಸ್ತಿಯನ್ನು ಕಲಿತ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಚಿತ್ರದಲ್ಲಿ ಅನುಷ್ಕಾ ಶರ್ಮಾ ಸಲ್ಮಾನ್‌ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಇಬ್ಬರೂ ಈ ಚಿತ್ರದಲ್ಲಿ ಕುಸ್ತಿ ಪಟುಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಅನುಷ್ಕಾ ಶರ್ಮಾ ತಮ್ಮ ಟ್ವೀಟರ್ ಖಾತೆಯಲ್ಲಿ ತಾನು ಕುಸ್ತಿ ಅಭ್ಯಾಸದಲ್ಲಿ ನಿರತಳಾದ ಫೋಟೋಗಳನ್ನು ಶೇರ್‌ ಮಾಡಿದ್ದಾಳೆ. ತನ್ನ ಟ್ರೇನರ್‌ ಜೊತೆ ಕುಸ್ತಿ ಕಲಿಯುವುದರಲ್ಲಿ ಬ್ಯುಸಿಯಾಗಿರುವ ಅನುಷ್ಕಾ ಸಲ್ಲುಗೆ ಸವಾಲೆಸೆಯಲು ಸಿದ್ಧಳಾಗುತ್ತಿದ್ದಾಳೆ. ಚಿತ್ರ ಯಶ್ ಚೋಪ್ರಾ ಬ್ಯಾನರ್ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದು, ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಮಾಡುತ್ತಿದ್ದಾರೆ.