ಲೈಂಗಿಕ ಕಿರುಕುಳ ಆರೋಪ : ನಾನಾ ಪಾಟೇಕರ್ ಗೆ ಶಿವಸೇನಾ ಬೆಂಬಲ ಬಾಲಿವುಡ್ ನಟ ನಾನಾ ಪಟೇಕರ್ ವಿರುದ್ಧ ನಟಿ ತನುಶ್ರೀ ದತ್ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದಲ್ಲಿ ಪರ ಹಾಗೂ ವಿರುದ್ಧ ಗುಂಪುಗಳು ಸೃಷ್ಟಿಯಾಗಿವೆ. ಮುಂಬೈ: ಬಾಲಿವುಡ್ ನಟ ನಾನಾ ಪಟೇಕರ್ ವಿರುದ್ಧ ನಟಿ ತನುಶ್ರೀ ದತ್ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದಲ್ಲಿ ಪರ ಹಾಗೂ ವಿರುದ್ಧ ಗುಂಪುಗಳು ಸೃಷ್ಟಿಯಾಗಿವೆ. ಪ್ರಿಯಾಂಕಾ ಚೋಪ್ರಾ, ಪರ್ಹನ್ ಅಕ್ತರ್, ರೇಣುಕಾ ಶಹಾನೆ, ರಿಚಾ ಚಂದಾ, ಸ್ವರ ಭಾಸ್ಕರ್, ಸೊನಾಮ್ ಕಪೂರ್, ರವೀನಾ ಟಂಡನ್, ಅನುರಾಗ್ ಕಶ್ಯಪ್ ಮೊದಲಾದವರು ತನುಶ್ರೀ ದತ್ ಅವರಿಗೆ ಬೆಂಬಲ ಘೋಷಿಸಿದ್ದು, ಮಹಿಳೆಯರ ದೌರ್ಜನ್ಯ ವಿರುದ್ಧ ಮೌನ ವಹಿಸದಂತೆ ಆಗ್ರಹಿಸಿದ್ದಾರೆ. ಆದರೆ. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸಲ್ಮಾನ್ ಖಾನ್ ತಿರಸ್ಕರಿಸಿದ್ದಾರೆ. ಈ ನಡುವೆ ನಾನಾ ಪಟೇಕರ್ ಅವರಿಗೆ ಶಿವಸೇನಾ ಬೆಂಬಲ ಘೋಷಿಸಿದೆ. ನಾನಾ ಪಟೇಕರ್ ಅವರ ಮಾತುಗಳನ್ನು ಕೇಳಿದ್ದು, ಅವರು ಯೋಗ್ಯರೆಂದು ಗೊತ್ತಿದೆ. . ಬಾಲಿವುಡ್ ನಲ್ಲಿ ಅವರು ದೊಡ್ಡ ನಟರಾಗಿದ್ದು, ಅವರ ಮಾತುಗಳನ್ನು ಕೇಳಬೇಕಾಗಿದೆ. ಅವರು ಕೂಡಾ ತನುಶ್ರೀ ದತ್ ಅವರಿಗೆ ಕಾನೂನು ನೋಟಿಸ್ ಕಳುಹಿಸಬೇಕು ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. 2008ರಲ್ಲಿ ಹಾರ್ನ್ ಓಕೆ ಪ್ಲೀಸಸ್ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಾನಾ ಪಾಟೇಕರ್ ತಮ್ಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ತನುಶ್ರೀ ದತ್ ಆರೋಪಿಸಿದ್ದರು. ಆದರೆ, ಈ ಆರೋಪವನ್ನು ನಾನಾ ಪಾಟೇಕರ್ ತಿರಸ್ಕರಿಸಿದ್ದರು.