ಬಾಲಿವುಡ್ ನಟಿ ಸೋಫಿಯಾ ನಿಶ್ಚಿತಾರ್ಥ ಬ್ರಿಟಿಷ್ ಮೂಲದ ಬಾಲಿವುಡ್ ನಟಿ ಸೋಫಿಯಾ ಚೌಧರಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಕೆಲ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ... ಬ್ರಿಟಿಷ್ ಮೂಲದ ಬಾಲಿವುಡ್ ನಟಿ ಸೋಫಿಯಾ ಚೌಧರಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಕೆಲ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸೋಫಿಯಾ ಟ್ವೀಟರ್ ನಲ್ಲಿ ನಿಶ್ಚಿತಾರ್ಥ ಉಂಗುರವನ್ನು ಹಾಕಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದು ತಮ್ಮ ಕೈ ಹಿಡಿಯುವ ಅದೃಷ್ಟವಂತ ಯಾರೆನ್ನುವುದನ್ನು ಬಹಿರಂಗಪಡಿಸಿಲ್ಲ. ಸೋಫಿಯಾಗೆ ಬಾಲಿವುಡ್ ಬೆಡಗಿಯರಾದ ಬಿಪಾಷ ಬಸು, ನೇಹಾ ದುಪಿಯಾ ಸೇರಿದಂತೆ ಹಲವು ನಟಿಮಣಿಯರು ಶುಭ ಕೋರಿದ್ದಾರೆ. ಸೋಫಿಯಾ ಬಾಲಿವುಡ್ ನ ಶಾದಿ ನಂ.1, ಫ್ಯಾರ್ ಕೇ ಸೈಡ್ ಇಫೆಕ್ಷನ್, ಹೇ ಬೇಬಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ,