ಬಾಲಿವುಡ್ ಹಿರಿಯ ನಟ ರಂಜಿತ್ ಚೌಧರಿ ನಿಧನ ರಂಗ ಕಲಾವಿದ ಹಾಗೂ ಬಾಲಿವುಡ್‌, ಮರಾಠಿ ಸಿನಿಮಾ ನಟ ರಂಜಿತ್‌ ಚೌಧರಿ ಬುಧವಾರ ತಡ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ರಂಗ ಕಲಾವಿದ ಹಾಗೂ ಬಾಲಿವುಡ್‌, ಮರಾಠಿ ಸಿನಿಮಾ ನಟ ರಂಜಿತ್‌ ಚೌಧರಿ ಬುಧವಾರ ತಡ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.ಅನಾರೋಗ್ಯದಿಂದ ಬಳಲುತ್ತಿದ್ದ ರಂಜಿತ್‌ ಚೌಧರಿ ಹಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಂಜಿತ್‌ ಚೌಧರಿ ನಿಧನದ ಸುದ್ದಿಯನ್ನು ಅವರ ಸಹೋದರಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.ರಂಜಿತ್‌ ನಟಿಸಿದ್ದ ಕಾಮಸೂತ್ರ, ಖಠಾ ಮೀಠಾ, ಖೂಬುಸೂರತ್‌, ಕಾಮಸೂತ್ರ, ಮಸಾಲಾ ಮಿಸಿಸಿಪ್ಪಿ ಸಿನಿಮಾಗಳು ಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು.