ಪಾಕಿಸ್ತಾನ ಕಲಾವಿದರ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ: ಅಮಿತಾಬ್ ಬಚ್ಚನ್ ಬಾಲಿವುಡ್ ನಲ್ಲಿ ಪಾಕಿಸ್ತಾನ ಕಲಾವಿದರ ನಟನೆ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವಲ್ಲ ಎಂದು ಹೇಳಿರುವ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ನಾವು ... ಮುಂಬಯಿ: ಬಾಲಿವುಡ್ ನಲ್ಲಿ ಪಾಕಿಸ್ತಾನ ಕಲಾವಿದರ ನಟನೆ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವಲ್ಲ ಎಂದು ಹೇಳಿರುವ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ನಾವು ಸುರಕ್ಷಿತವಾಗಿರುವಂತೆ ದೇಶದ ಗಡಿ ಕಾಯುತ್ತಿರುವ ಯೋಧರ ಬಗ್ಗೆ ಒಗ್ಗಟ್ಟು ತೋರುವ ಸಮಯ ಇದು ಎಂದು ತಿಳಿಸಿದ್ದಾರೆ. ತಮ್ಮ 74 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮೆ ಮೇಲೆ ಇಷ್ಟೊಂದು ಅಭಿಮಾನ ತೋರುತ್ತಿರುವ ಅಭಿಮಾನಗಳಿಗೆ ಕೃತಜ್ಞತೆ ತಿಳಿಸಿದರು. ಹಿಂದಿನಂತೆ ಮುಂದೆಯೂ ಸವಾಲಿನ ಪಾತ್ರಗಳನ್ನು ಅಭಿನಯಿಸುವುದಾಗಿ ಹೇಳಿದ್ದಾರೆ, ಇನ್ನೂ ತಮ್ಮನ್ನು ಶತೃಘ್ನ ಸಿನ್ಹಾ ರಾಷ್ಟ್ರಪತಿಯಾಗಿ ನೇಮಿಸಬೇಕು ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅಮಿತಾಬ್ ಬಚ್ಚನ್, ಶತೃಘ್ನ ಬಾಬು ಯಾವಾಗಲು ಹಾಸ್ಯ ಮಾಡುತ್ತಿರುತ್ತಾರೆ, ಆದರೆ ಅವರು ಹೇಳಿದ ಹಾಗೆ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.