ರಣ್ ಬೀರ್ ಜೊತೆಗೆ ರಿಲೇಷನ್ ಶಿಪ್ ಅಧಿಕೃತವಾಗಿ ಬಹಿರಂಗಪಡಿಸಿದ ಆಲಿಯಾ ರಣ್ ಬೀರ್ ಕಪೂರ್ ಮತ್ತು ಆಲಿಯಾ ಜೊತೆ ಇರುವ ಫೋಟೋಗಳು ಮತ್ತು ಅವರ ಕುರಿತ ಗಾಸಿಪ್ಪುಗಳು ಬಾಲಿವುಡ್ ಪಟ್ಟಣದಲ್ಲಿ ಹರಿದಾಡಿದ್ದವು. ಆದರೆ, ಈ ಬಗ್ಗೆ ಇದುವರೆಗೂ ರಣ್ ಬೀರ್ ಆಗಲಿ ಆಲಿಯಾ ಆಗಲಿ ಇಲ್ಲವೇ ಅವರ ಕುಟುಂಬ ಸದಸ್ಯರಾಗಲಿ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಮುಂಬೈ: ಶುಭಕಾರ್ಯವನ್ನು ಶುಭ ಸಂದರ್ಭಗಳಲ್ಲೇ ಮಾಡುವುದು ಭಾರತೀಯರು ಅನೂಚಾನವಾಗಿ ರೂಢಿಸಿಕೊಂಡು ಬಂದಿರುವ ಅಭ್ಯಾಸ. ಬಾಲಿವುಡ್ ತಾರೆಯರಾದ ರಣ್ ಬೀರ್ ಕಪೂರ್ ಮತ್ತು ಆಲಿಯಾ ಭಟ್ ತಾವಿಬ್ಬರೂ ರಿಲೇಷನ್ ಶಿಪ್ ನಲ್ಲಿ ಇರುವುದನ್ನು ದೀಪಾವಳಿಯ ಈ ಶುಭ ಸಂದರ್ಭದಲ್ಲಿಯೇ ಅಧಿಕೃತವಾಗಿ ಬಹಿರಂಗಪಡಿಸಿರುವುದು ವಿಶೇಷ. ಇದನ್ನೂ ಓದಿ: 'ವಿಶ್ವದ ಅತ್ಯಂತ ಸುಂದರ ವ್ಯಕ್ತಿ' ನನ್ನ ಗಂಡ: ಕರೀನಾ ಕಪೂರ್ಇದುವರೆಗೂ ರಣ್ ಬೀರ್ ಕಪೂರ್ ಮತ್ತು ಆಲಿಯಾ ಜೊತೆ ಇರುವ ಫೋಟೋಗಳು ಮತ್ತು ಅವರ ಕುರಿತ ಗಾಸಿಪ್ಪುಗಳು ಬಾಲಿವುಡ್ ಪಟ್ಟಣದಲ್ಲಿ ಹರಿದಾಡಿದ್ದವು. ಆದರೆ, ಈ ಬಗ್ಗೆ ಇದುವರೆಗೂ ರಣ್ ಬೀರ್ ಆಗಲಿ ಆಲಿಯಾ ಆಗಲಿ ಇಲ್ಲವೇ ಅವರ ಕುಟುಂಬ ಸದಸ್ಯರಾಗಲಿ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. (@)ಇದನ್ನೂ ಓದಿ: 'ನನ್ನ ಮಗ ಡ್ರಗ್ಸ್ ಸೇವಿಸಲಿ, ಹುಡುಗಿಯರ ಹಿಂದೆ ಸುತ್ತಲಿ' ಎಂದಿದ್ದ ಶಾರುಖ್ ಖಾನ್ ಹಳೆಯ ವಿಡಿಯೋ ವೈರಲ್ಇದೀಗ ಮೊದ ಬಾರಿಗೆ ಆಲಿಯಾ ತಾವು ರಣ್ ಬೀರ್ ಜೊತೆಗಿರುವ ಫೋಟೊ ಒಂದನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪೋಸ್ಟ್ ನಲ್ಲಿ " ... " ಎಂದು ಆಲಿಯಾ ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಸಮಂತಾ- ನಾಗಚೈತನ್ಯ ವಿಚ್ಛೇದನಕ್ಕೆ 'ಡಿವೋರ್ಸ್ ಎಕ್ಸ್ ಪರ್ಟ್' ಅಮೀರ್ ಖಾನ್ ಕಾರಣ: ಕಂಗನಾ ರಾನಾವತ್ಈ ಪೋಸ್ಟ್ ಗೆ ಬಾಲಿವುಡ್ ತಾರೆಯರು ಕಾಮೆಂಟ್ ಮಾಡಿ ಪ್ರೀತಿಯ ಎಮೋಜಿಗಳನ್ನು ಕಾಮೆಂಟ್ ರೂಪದಲ್ಲಿ ಪ್ರಕಟಿಸಿದ್ದಾರೆ. ಇದೀಗ ಅಲಿಯಾ- ರಣ್ ಬೀರ್ ತಮ್ಮ ಸಂಬಂಧವನ್ನು ಜಗತ್ತಿನ ಮುಂದೆ ಅಧಿಕೃತವಾಗಿ ತೋರ್ಪಡಿಸಿಕೊಂಡಿರುವುದರಿಂದ ಅವರಿಬ್ಬರ ವಿವಾಹದ ಸುದ್ದಿ ಕೇಳಿಬರುವ ದಿನಗಳು ದೂರವಿಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಇಂಟರ್ನೆಟ್ ನಲ್ಲಿ ಕಿಚ್ಚು ಹೊತ್ತಿಸಿದ ಪರಮ್ ಸುಂದರಿ: ಕೃತಿ ಸನೋನ್ ಹಾಡಿಗೆ ತಾಳ ಹಾಕಿದ ಟಾಪ್ ಪರಮ ಸುಂದರಿಯರು