ಬೃಹತ್ ಮುಂಬೈ ಪಾಲಿಕೆಗೆ 1, 93, 784 ರು ದಂಡ ತೆತ್ತ ಶಾರೂಖ್ ಖಾನ್ ಬೃಹತ್ ಮುಂಬೈ ಮಹಾನಗರ ಪಾಲಿಕೆಗೆ ಬಾಲಿವುಡ್ ನಟ ಶಾರೂಖ್ ಖಾನ್ 1,93,784 ರು ದಂಡ ಪಾವತಿಸಿದ್ದಾರೆ.... ಮುಂಬೈ: ಬೃಹತ್ ಮುಂಬೈ ಮಹಾನಗರ ಪಾಲಿಕೆಗೆ ಬಾಲಿವುಡ್ ನಟ ಶಾರೂಖ್ ಖಾನ್ 1,93,784 ರೂ ದಂಡ ಪಾವತಿಸಿದ್ದಾರೆ. ಮುಂಬಯಿನ ಬಾಂದ್ರಾದಲ್ಲಿರುವ ಶಾರೂಖ್ ತಮ್ಮ ನಿವಾಸ ' ಮನ್ನತ್‌' ಹೊರಗಡೆ ಅಕ್ರಮವಾಗಿ ರ್ಯಾಂಪ್ ನಿರ್ಮಿಸಿದ್ದಾರೆಂಬ ಕಾರಣಕ್ಕೆ ಪಾಲಿಕೆ ಈ ದಂಡ ವಿಧಿಸಿ, ಅಕ್ರಮವಾಗಿ ನಿರ್ಮಿಸಲಾಗಿದ್ದ ರ್ಯಾಂಪ್ ನ್ನು ಬೃಹತ್ ಮುಂಬೈ ಮಹಾನಗರಪಾಲಿಕೆ ತೆರವುಗೊಳಿಸಿತ್ತು. ತೆರವು ಕಾರ್ಯಾಚರಣೆಗೆ ತಗುಲಿದ್ದ ವೆಚ್ಚವನ್ನು ಶಾರೂಖ್‌ ಖಾನ್‌ ದಂಡದ ರೂಪದಲ್ಲಿ ಪಾವತಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅನಿಲ್ ಗಲಗಲಿ ಎಂಬುವವರು ಆರ್‌ಟಿಐ ಕಾಯ್ದೆಯಡಿ ಶಾರೂಖ್ ಮನೆಯ ಆವರಣದಲ್ಲಿನ ಅಕ್ರಮ ರ್ಯಾಂಪ್ ಕುರಿತಂತೆ ಪ್ರಶ್ನಿಸಿದ್ದರು. ಶಾರುಖ್‌ ಖಾನ್‌ ಸಿಟಿ ಬ್ಯಾಂಕ್ ಚೆಕ್ ಮೂಲಕ 1, 93, 784 ರೂ ದಂಡ ಪಾವತಿಸಿದ್ದಾರೆ ಎಂದು ಮಹಾನಗರಪಾಲಿಕೆ ಅಸಿಸ್ಟೆಂಟ್ ಎಂಜನಿಯರ್, ಗಲ್ಗಲಿ ಅವರಿಗೆ ಮಾಹಿತಿ ನೀಡಿದ್ದಾರೆ.