ಸಾಯೋವರೆಗೂ ದುಡಿದು ಸಂಪಾದಿಸುವೆ: ಕರಿನಾ ಕಪೂರ್ ಕರೀನಾ ಕಪೂರ್ ನಟನೆಯ ಕೀ ಅಂಡ್ ಕಾ ಚಿತ್ರದಲ್ಲಿ ಹೊರಗಡೆ ದುಡಿಯುವ ಗೃಹಿಣಿಯ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ರೀತಿ ತಾನು ಸಾಯೋವರೆಗೂ ದುಡಿದು ಹಣ ಸಂಪಾದಿಸಿ... ಕರೀನಾ ಕಪೂರ್ ನಟನೆಯ ಕೀ ಅಂಡ್ ಕಾ ಚಿತ್ರದಲ್ಲಿ ಹೊರಗಡೆ ದುಡಿಯುವ ಗೃಹಿಣಿಯ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ರೀತಿ ತಾನು ಸಾಯೋವರೆಗೂ ದುಡಿದು ಹಣ ಸಂಪಾದಿಸಿ ಸ್ವತಂತ್ರಳಾಗಿ ಬದುಕುತ್ತೇನೆ ಎಂದು ಹೇಳಿದ್ದಾರೆ. ಇಂದು ನಾನು ಪತ್ನಿ(ನಟ ಸೈಫ್ ಅಲಿ ಖಾನ್) ನಾಳೆ ತಾಯಿ ಆಗಬಹುದು. ಆದರೆ ಈ ಜೀವನ ಇರುವರೆಗೂ ನಾನು ದುಡಿದೇ ಸಂಪಾದಿಸುತ್ತೇನೆ ಈ ಷರತ್ತಿನ ಮೇಲೆ ನಾನು ಸೈಫ್ ಅಲಿ ಖಾನ್ ರನ್ನು ಮದುವೆಯಾಗಿದ್ದು ಎಂದು ಕರೀನಾ ಹೇಳಿಕೊಂಡಿದ್ದಾರೆ. ಮಹಿಳೆಯರ ಶಕ್ತಿಯಲ್ಲಿ ನನಗೆ ದೃಢ ನಂಬಿಕೆ ಇದೆ. ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಆತ್ಮವಿಶ್ವಾಸ ಮಹಿಳೆಯರಲ್ಲಿ ಹೆಚ್ಚಿದೆ. ಹೊಸ ಜೀವಕ್ಕೆ ಜೀವ ಕೊಡುವಂತ ಮಹಿಳೆಯರಿಗೆ ಹೆಚ್ಚಿನ ಶಕ್ತಿ ಇದ್ದು, ಒಂದೇ ಸಮಯದಲ್ಲಿ ಮಲ್ಟಿ ಟಾಸ್ಕ್ ಗಳನ್ನು ಮಾಡಲು ಶಕ್ತರು ಎಂದು ಕರೀನಾ ಹೇಳಿದ್ದಾರೆ.