ಕೋಟಿ ಕೊಟ್ಟರೂ ಬೇಡ: ಕಂಗನಾ ಕ್ವೀನ್', `ತನು ವೆಡ್ಸ್ ಮನು ರಿಟನ್ರ್ಸ್' ಚಿತ್ರಗಳ ಸರಣಿ ಯಶಸ್ಸಿನ ನಂತರ ಗುಂಗುರು ಕೂದಲ ಚೆಲುವೆ ಕಂಗನಾಳಿಗೆ ಬಾಲಿವುಡ್‍ನಲ್ಲೂ ಬೇಡಿಕೆ, ಜಾಹೀರಾತಿಗೂ ಬೇಡಿಕೆ... ಕ್ವೀನ್', `ತನು ವೆಡ್ಸ್ ಮನು ರಿಟನ್ರ್ಸ್' ಚಿತ್ರಗಳ ಸರಣಿ ಯಶಸ್ಸಿನ ನಂತರ ಗುಂಗುರು ಕೂದಲ ಚೆಲುವೆ ಕಂಗನಾಳಿಗೆ ಬಾಲಿವುಡ್‍ನಲ್ಲೂ ಬೇಡಿಕೆ, ಜಾಹೀರಾತಿಗೂ ಬೇಡಿಕೆ. ಹೀಗೆ ಕ್ವೀನ್‍ಗಾಗಿ ಕ್ಯೂ ನಿಂತಿದ್ದ ಫೇರ್‍ನೆಸ್ ಕಂಪನಿಯೊಂದು ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂದಿರುಗಿದೆ. `ಫೇರ್‍ನೆಸ್ ಜಾಹೀರಾತುಗಳಲ್ಲಿ ಬಿಳಿಯಿದ್ದರೆ ಮಾತ್ರ ಚೆಲುವು ಎಂಬಂತೆ ತೋರಿಸುತ್ತಾರೆ. ಹಲವಾರು ಅಭಿಮಾನಿಗಳಿರುವಾಗ ನಾನು ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಕಪ್ಪಿದ್ದವರೂ ಚೆನ್ನಾಗಿಯೇ ಇರುತ್ತಾರೆ. ನನ್ನ ತಂಗಿ ಕೂಡಾ ಕೃಷ್ಣಸುಂದರಿಯೇ. ಇಂಥ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದರಿಂದ ನನ್ನ ತಂಗಿಗೂ, ಉಳಿದ ಕಪ್ಪು ಬಣ್ಣದ ಅಭಿಮಾನಿಗಳಿಗೂ ತಪ್ಪು ಸಂದೇಶ ನೀಡಿದಂತಾಗುತ್ತದೆ' ಎಂದಿರುವ ಕಂಗನಾ 2 ಕೋಟಿ ರುಪಾಯಿಯ ಜಾಹೀರಾತನ್ನು ತಿರಸ್ಕರಿಸಿದ್ದಾಳೆ. ಶಾರುಖ್, ಅಮಿತಾಭ್‍ರಂಥ ನಟರೂ ಕಾನ್ಸೆಪ್ಟ್ ನೋಡದೆ ಜಾಹೀರಾತುಗಳಲ್ಲಿ ನಟಿಸಿ ಹಣ ಮಾಡುವಾಗ, ಕಂಗನಾಳ ಈ ನಿರ್ಧಾರ ಎಲ್ಲೆಡೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದೆ. ಈಕೆ ನಿಜವಾಗಿಯೂ ಕ್ವೀನ್ ಅಲ್ಲವೇ..!