ಬೀರಬಲ್‌ ಎಂದೇ ಖ್ಯಾತಿ ಪಡೆದಿದ್ದ 'ಶೋಲೆ' ನಟ ಸತೀಂದರ್ ಕುಮಾರ್ ಖೋಸ್ಲಾ ನಿಧನ ಬೀರಬಲ್‌ ಎಂದೇ ಖ್ಯಾತಿ ಪಡೆದಿದ್ದ ಬಾಲಿವುಡ್ ಹಿರಿಯ ನಟ ಸತೀಂದರ್ ಕುಮಾರ್ ಖೋಸ್ಲಾ ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮುಂಬೈ: ಬೀರಬಲ್‌ ಎಂದೇ ಖ್ಯಾತಿ ಪಡೆದಿದ್ದ ಬಾಲಿವುಡ್ ಹಿರಿಯ ನಟ ಸತೀಂದರ್ ಕುಮಾರ್ ಖೋಸ್ಲಾ ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸತೀಂದರ್‌ ಕುಮಾರ್‌ ಅವರು ಮುಂಬೈನ ಕೋಕಿಲಾಬೆನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮಂಗಳವಾರ ರಾತ್ರಿ ಅವರು ಕಾರ್ಡಿಯಾಕ್‌ ಅರೆಸ್ಟ್‌ನಿಂದ ಮೃತಪಟ್ಟಿದ್ದಾರೆ ಎಂದು ಅವರ ಪುತ್ರಿ ಶಾಲಿನಿ ತಿಳಿಸಿದ್ದಾರೆ.ಇದನ್ನು ಓದಿ: ಕಿಂಗ್ ಖಾನ್ ಈಗ ಬಾಕ್ಸ್ ಆಫೀಸ್ ಕಿಂಗ್: ಎರಡೇ ದಿನಕ್ಕೆ 240 ಕೋಟಿ ಗಳಿಸಿದ 'ಜವಾನ್'1975 ರಲ್ಲಿ ತೆರೆಕಂಡ ಧರ್ಮೇಂದ್ರ ಮತ್ತು ಅಮಿತಾಭ್ ಬಚ್ಚನ್ ಅಭಿನಯದ "ಶೋಲೆ" ಚಿತ್ರದಲ್ಲಿ ಅರ್ಧ ಮೀಸೆಯ ಕೈದಿಯ ಪಾತ್ರದಲ್ಲಿ ಖೋಸ್ಲಾ ಅವರು ಅಭಿನಯಿಸಿದ್ದರು.ಸತೀಂದರ್‌ ಕುಮಾರ್‌ ಅವರು ಹಾಸ್ಯಪಾತ್ರಕ್ಕೆ ಹೆಸರಾಗಿದ್ದರು. ಉಪ್‌ಕಾರ್‌, ರೋಟಿ ಕಪ್ಡಾ ಔರ್‌ ಮಕಾನ್‌, ಕ್ರಾಂತಿ, ನಸೀಬ್‌, ಯಾರಾನಾ, ಹಮ್‌ ಹೈ ರಹಿ ಪ್ಯಾರ್‌ ಕೆ, ಅಂಜಾಮ್‌ ಸೇರಿ ಅನೇಕ ಸಿನಿಮಾಗಳಲ್ಲಿ ಸತೀಂದರ್‌ ಕುಮಾರ್‌ ನಟಿಸಿದ್ದಾರೆ.