ರಿಯಾ ಚಕ್ರವರ್ತಿ ಜೊತೆಗಿನ ಸುಶಾಂತ್ ಸಿಂಗ್ ಕೊನೆಯ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್! ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಹಠಾತ್ ಸಾವಿನ ಸುದ್ದಿ ಬಾಲಿವುಡ್ ಚಿತ್ರರಂಗ ಹಾಗೂ ಅಭಿಮಾನಿಗಳನ್ನು ಆತಂಕಕ್ಕೊಳಪಡಿಸಿರುವಂತೆಯೇ, ಅವರ ಗರ್ಲ್ ಫ್ರೆಂಡ್ ಎಂದು ಹೇಳಲಾಗುತ್ತಿದ್ದ ನಟಿ ರಿಯಾ ಚಕ್ರವರ್ತಿ ಜೊತೆಗಿನ ಸುಶಾಂತ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಹಠಾತ್ ಸಾವಿನ ಸುದ್ದಿ ಬಾಲಿವುಡ್ ಚಿತ್ರರಂಗ ಹಾಗೂ ಅಭಿಮಾನಿಗಳನ್ನು ಆತಂಕಕ್ಕೊಳಪಡಿಸಿರುವಂತೆಯೇ, ಅವರ ಗರ್ಲ್ ಫ್ರೆಂಡ್ ಎಂದು ಹೇಳಲಾಗುತ್ತಿದ್ದ ನಟಿ ರಿಯಾ ಚಕ್ರವರ್ತಿ ಜೊತೆಗಿನ ಸುಶಾಂತ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಜಿಮ್ ಹೊರಗಡೆಯ ಸುಶಾಂತ್ ಸಿಂಗ್ ಹಾಗೂ ರಿಯಾ ಚಕ್ರವರ್ತಿ ಜೊತೆಗಿರುವ ಈ ಫೋಟೋ ಇದಾಗಿದ್ದು, ಮಾರ್ಚ್ 11 ರಂದು ತೆಗೆಯಲಾಗಿದೆ. ಈ ಫೋಟೋದಲ್ಲಿ ಸುಶಾಂತ್ ಸಿಂಗ್ ನೀಲಿ ಬಣ್ಣದ ಟಿ ಶಾರ್ಟ್ ಮತ್ತು ಕಪ್ಪು ಬಣ್ಣದ ಶಾರ್ಟ್ಸ್ ಧರಿಸಿದ್ದರೆ, ರಿಯಾ, ಗ್ಯಾಲಕ್ಸಿಯ ಪ್ರಿಂಟ್ ಯೋಗ ಶಾರ್ಟ್ಸ್ ಹಾಗೂ ಗ್ರೇ ಟಾಫ್ ಧರಿಸಿದ್ದಾರೆ. ಸುಶಾಂತ್ ಹಾಗೂ ರಿಯಾ ಆಗಾಗ್ಗೆ ಒಟ್ಟಿಗೆ ಜಿಮ್ ಮಾಡುತ್ತಿದ್ದರು. ಜಿಮ್ ಹೊರಗಡೆ ಹಲವು ಬಾರಿ ಅವರು ಕಾಣಿಸಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ಐಎಎನ್ ಎಸ್ ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ರಿಯಾ, ಖಾಸಗಿ ಜೀವನದಲ್ಲಿನ ಗಾಸಿಪ್ ಗಳಿಗೆ ಆದ್ಯತೆ ನೀಡುವುದಿಲ್ಲ, ಹಾಗಾಗಿ ಸುಶಾಂತ್ ಜೊತೆಗಿನ ಸಂಬಂಧ ಕುರಿತ ವದಂತಿಗಳಿಗೆ ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದರು. ಸುಶಾಂತ್ ಒಳ್ಳೆಯ ಸ್ನೇಹಿತರಾಗಿದ್ದು, ಹಲವು ವರ್ಷಗಳಿಂದ ಚೆನ್ನಾಗಿ ಗೊತ್ತಿದೆ. ಈ ವಿಚಾರದಲ್ಲಿ ಏನನ್ನೂ ಹೇಳಲು ಬಯಸಲ್ಲ ಎಂದು ಹೇಳಿಕೆ ನೀಡಿದ್ದರು. ಸುಶಾಂತ್ ಸಿಂಗ್ ಬಾಂದ್ರಾದಲ್ಲಿನ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಆದರೆ, ಮಾನಸಿಕ ಒತ್ತಡ ಕಾರಣ ಎಂಬುದು ಪ್ರಾಥಮಿಕ ಕಾರಣದಿಂದ ತಿಳಿದುಬಂದಿದೆ.