ಮತ್ತೆ ತೆರೆಗೆ ಬರಲಿದೆ ಸದ್ಮಾ ಬಾಲಿವುಡ್ ಗೆ ಏನಾಗಿದೆಯೋ ಗೊತ್ತಾಗುತ್ತಿಲ್ಲ. ತೆಲುಗಿನ ಚಿತ್ರಗಳನ್ನು ರೀಮೇಕ್ ಮಾಡಿದ ಬಳಿಕ ಈಗ ಹಳೆಯ ಚಿತ್ರಗಳನ್ನು ಮರು ನಿರ್ಮಾಣ ಮಾಡುವುದಕ್ಕೆ ಮುಂದಾಗುತ್ತಿದೆ... ಬಾಲಿವುಡ್ ಗೆ ಏನಾಗಿದೆಯೋ ಗೊತ್ತಾಗುತ್ತಿಲ್ಲ. ತೆಲುಗಿನ ಚಿತ್ರಗಳನ್ನು ರೀಮೇಕ್ ಮಾಡಿದ ಬಳಿಕ ಈಗ ಹಳೆಯ ಚಿತ್ರಗಳನ್ನು ಮರು ನಿರ್ಮಾಣ ಮಾಡುವುದಕ್ಕೆ ಮುಂದಾಗುತ್ತಿದೆ. ಇತ್ತೀಚೆಗೆ ಘಾಯಲ್ ಚಿತ್ರ ಮರು ನಿರ್ಮಾಣವಾಗುತ್ತಿರುವ ಸುದ್ದಿ ಹೊರಬಿದ್ದಿತ್ತು. ಈಗ ಸದ್ಮಾ ಸರದಿ. 1983 ರಲ್ಲಿ ಬಾಲು ಮಹೇಂದ್ರ ನಿರ್ದೇಶಿಸಿದ್ದ ಈ ಚಿತ್ರ ತಮಿಳು ಮತ್ತು ಹಿಂದಿಯಲ್ಲಿ ಸೂಪರ್ ಹಿಟ್ ಚಿತ್ರವೆನಿಸಿಕೊಂಡಿತು. ಕಮಲ್ ಹಾಸನ್ ಮತ್ತು ಶ್ರೀದೇವಿ ನಟನೆ ಮತ್ತು ಇಳಯರಾಜಾ ಅವರ ಸಂಗೀತ ಚಿತ್ರವನ್ನು ಎವರ್ ಗ್ರೀನ್ ಚಿತ್ರವನ್ನಾಗಿಸಿತ್ತು. ಹೊಸ ತಲೆಮಾರಿಗೆ ಪ್ರೇಮದ ಅನುಭೂತಿಯನ್ನು ಮನವರಿಕೆ ಮಾಡಿಕೊಡುವುದಕ್ಕಾಗಿ ಈ ಚಿತ್ರವನ್ನು ರೀಮೇಕ್ ಮಾಡುತ್ತಿರುವುದಾಗಿ ಲಾಯ್ಡ್ ಬಾಪ್ಟಿಸ್ಟ್ ಹೇಳಿದ್ದಾರೆ. ಕಮಲ್ ಹಾಸನ್ ಮತ್ತು ಶ್ರೀದೇವಿಯವರೇ ಈ ಪಾತ್ರಗಳನ್ನು ಹೊಸ ಚಿತ್ರದಲ್ಲಿ ನಿರ್ವಹಿಸಬೇಕು ಎಂಬುದು ಲಾಯ್ಡ್ ಆಸೆ. ಆದರೆ ಅವರು ಒಪ್ಪಿಕೊಳ್ಳುತ್ತಾರೆ ಎಂಬ ಸಂದೇಹವಿದೆ. ಹಾಗಾಗಿ ಬೇರೊಂದು ಪಟ್ಟಿಯನ್ನೂ ಸಿದ್ಧಪಡಿಸಿಕೊಂಡಿರುವ ಲಾಯ್ಡ್ ಮತ್ತು ಕಾಸ್ಟಿಂಗ್ ಡೈರೆಕ್ಟರ್ ಮುಕೇಶ್ ಛಾಬ್ರಾ ನಟ-ನಟಿಯರ ಹುಡುಕಾಟವನ್ನು ನಡೆಸಿದ್ದಾರೆ.