ಪ್ರಸಿದ್ಧ ಬಾಲಿವುಡ್ ಗಾಯಕಿಗೂ ಬಂತು ಕೊರೋನಾ! ಕೊರೋನಾವೈರಸ್ ದಿನದಿನಕ್ಕೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಇದೀಗ ಭಾರತದಲ್ಲಿ ಈ ಮಹಾಮಾರಿಗೆ ಐವರು ಬಲಿಯಾಗಿದ್ದಾರೆ. ಅಲ್ಲದೆ ಇನ್ನೂರಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಶುಕ್ರವಾರ ಸಹ ಉತ್ತರ ಪ್ರದೇಶದಲ್ಲಿ ನಾಲ್ಕು ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು ಇದರಲ್ಲಿ ಖ್ಯಾತ ಬಾಲಿವುಡ್ ಗಾಯಕಿ ಕೂಡ ಇದ್ದಾರೆ. ಕೊರೋನಾವೈರಸ್ ದಿನದಿನಕ್ಕೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಇದೀಗ ಭಾರತದಲ್ಲಿ ಈ ಮಹಾಮಾರಿಗೆ ಐವರು ಬಲಿಯಾಗಿದ್ದಾರೆ. ಅಲ್ಲದೆ ಇನ್ನೂರಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಶುಕ್ರವಾರ ಸಹ ಉತ್ತರ ಪ್ರದೇಶದಲ್ಲಿ ನಾಲ್ಕು ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು ಇದರಲ್ಲಿ ಖ್ಯಾತ ಬಾಲಿವುಡ್ ಗಾಯಕಿ ಕೂಡ ಇದ್ದಾರೆ.ಗಾಯಕಿ ಕನ್ನಿಕಾ ಕಪೂರ್ ಲಖನೌನ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯ (ಕೆಜಿಎಂಯು)ನ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕನ್ನಿಕಾ ಕಪೂರ್ ಮಾರ್ಚ್ 15ರಂದು ಲಂಡನ್ನಿನಿಂದ ಲಖನೌಗೆ ಆಗಮಿಸಿದ್ದಾರೆ. ಅಪಾರ್ಟ್ ಮೆಂಟ್‍ನಲ್ಲಿ ಉಳಿದುಕೊಂಡಿದ್ದ ಅವರು ನಗರದ ಹೋಟೆಲ್ ಒಂದರಲ್ಲಿ ಪಾರ್ಟಿ ಏರ್ಪಡಿಸಿದ್ದರು. ಆ ಪಾರ್ಟಿಯಲ್ಲಿ ಕನಿಷ್ಟ 500 ಮಂದಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ತಮಗೆ ಕೊರೋನಾ ಲಕ್ಷಣಗಳಿರುವ ಬಗೆಗೆ ಗಾಯಕಿ ತಾವು ಇನ್ಸ್ಟಾಗ್ರಾಂ ಮೂಲಕ ಹೇಳಿಕೊಂಡಿದ್ದಾರೆ."ಕಳೆದ ನಾಲ್ಕು ದಿನಗಳಿಂಡ ನಾನು ಜ್ವರದಿಂದ ಬಳಲುತ್ತಿದ್ದೆ. ಇದೀಗ ಪರೀಕ್ಷೆ ನಡೆಸಲಾಗಿಕೊರೋನಾ ಪಾಸಿಟಿವ್ ಬಂದಿದೆ. ನಾನೀಗ ನಮ್ಮ ಕುಟುಂಬದಿಂದ ಸಂಪೂರ್ಣ ಪ್ರತ್ಯೇಕವಾಗಿದ್ದೇನೆ. ವೈದ್ಯಕೀಯ ಸಲಹೆ ಅನುಸರಿಸಿದ್ದು ನನ್ನ ಸಂಪರ್ಕಕ್ಕೆ ಬಂದವರ ಮ್ಯಾಪಿಂಗ್ ಸಹ ನಡೆದಿದೆ" ಅವರು ಹೇಳಿದ್ದಾರೆ.ಅಲ್ಲದೆ "ಯಾರಿಗಾದರೂ ಕಾಯಿಲೆಯ ಲಕ್ಷಣವು ಕಂಡುಬಂದರೆ ಅವರು ತಕ್ಷಣ ಪರೀಕ್ಷೆಗೆ ಒಳಗಾಗಿ ಪ್ರ್ತ್ಯೇಕವಾಗಿರಲು ಅಭ್ಯಾಸ ಮಾಡಿರಿ.ವದಂತಿಗೆ ಕಿವಿಗೊಡಬೇಡಿ, ಭಯಪಡಬೇಡಿ " ಎಂದು ಅವರು ಹೇಳಿದ್ದಾರೆ. , 4 , -19. . . 10days , 4 . . , , . , . . ! , (@kanik4kapoor) 20, 2020 1:22am