ಆ ರೇಷ್ಮೆ ಸೀರೆ ಉಟ್ಟರೆ ವಿದ್ಯಾಗೆ 13 ಕೋಟಿ! ಸೀರೆಯಲ್ಲಿ ವಿದ್ಯಾಬಾಲನ್ ಸೆಕ್ಸಿಯಾಗಿ ಕಾಣ್ತಾಳೆ ಅನ್ನೋದು ಎಲ್ಲರಿಗೂ ಗೊತ್ತು. ಬಾಲಿವುಡ್‍ನ ಬೇರೆಲ್ಲ ನಟಿಯರಿಗಿಂತ ಈ ನಟಿಯ ವಾರ್ಡ್‍ರೋಬಿನಲ್ಲಿ.. ಸೀರೆಯಲ್ಲಿ ವಿದ್ಯಾಬಾಲನ್ ಸೆಕ್ಸಿಯಾಗಿ ಕಾಣ್ತಾಳೆ ಅನ್ನೋದು ಎಲ್ಲರಿಗೂ ಗೊತ್ತು. ಬಾಲಿವುಡ್‍ನ ಬೇರೆಲ್ಲ ನಟಿಯರಿಗಿಂತ ಈ ನಟಿಯ ವಾರ್ಡ್‍ರೋಬಿನಲ್ಲಿ ಹೆಚ್ಚು ಸೀರೆಗಳು ಇವೆಯಂತೆ. ವಿದ್ಯಾ ಎಲ್ಲಿಗೆ ಪಾರ್ಟಿಗೆ ಹೋಗಲಿ, ಸೀರೆ ಉಟ್ಟು ಶಿಸ್ತಿನಲ್ಲಿ ಹೋಗುತ್ತಾಳೆ. ಈ ಇಮೇಜನ್ನೇ ಈಗ ಎನ್‍ಕ್ಯಾಶ್ ಮಾಡಿಕೊಳ್ಳಲು ಹೊರಟಿದೆ ಒಂದು ಸೀರೆ ಕಂಪನಿ. ರೇಷ್ಮೆ ಸೀರೆಯ ಜಾಹೀರಾತೊಂದಕ್ಕೆ ವಿದ್ಯಾಬಾಲನ್ ಒಪ್ಪಿಕೊಂಡಿದ್ದಾಳಂತೆ. ಸೀರೆ ಜಾಹೀರಾತು ಇಲ್ಲಿ ಸುದ್ದಿ ಅಲ್ಲ. ವಿದ್ಯಾಬಾಲನ್ ಇದಕ್ಕಾಗಿ ಪಡೆದ ಸಂಭಾವನೆಯೇ ಸುದ್ದಿ. ಬರೋಬ್ಬರಿ 13 ಕೋಟಿ ರುಪಾಯಿ ಪಡೆದಿದ್ದಾಳಂತೆ ವಿದ್ಯಾ. ಜಾಹೀರಾತಿನ ಶೂಟಿಂಗ್ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ. ಈಗ ಮರಾಠಿ ಸಿನಿಮಾವೊಂದರಲ್ಲಿ ನಟಿಸುತ್ತಿರುವ ವಿದ್ಯಾಳ ಕೈಯಲ್ಲಿ ಬಾಲಿವುಡ್ ಸಿನಿಮಾಗಳಿಲ್ಲ. ಈ ಕಾರಣಕ್ಕೂ ಜಾಸ್ತಿ ಸಂಭಾವನೆ ಕೇಳಿದ್ದಾಳೆ ಅನ್ನೋ ಗುಸುಗುಸು ಕೇಳಿಬರ್ತಿದೆ. ತೆರೆಯ ಮೇಲೆ ಸಿಲ್ಕ್ ಸ್ಮಿತಾ ಆಗಿ ಕಾಣಿಸಿಕೊಂಡವಳಿಗೆ, ಸಿಲ್ಕ್ ಸೀರೆಯೂ ಜನಪ್ರಿಯತೆ ತಂದುಕೊಡುತ್ತಿದೆ!