ಧೋನಿಗೆ ಆಲಿಯಾ ಸಾಕ್ಷಿ ಆಲಿಯಾ ಭಟ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾಳೆ. ಇದು ಆಲಿಯಾ ಭಟ್... ಆಲಿಯಾ ಭಟ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾಳೆ. ಇದು ಆಲಿಯಾ ಭಟ್ ಜೋಕ್ ಅಲ್ಲ. ನಿಜವಾದ ಸುದ್ದಿ. ಆಕೆ ಇಷ್ಟು ದಿನ ಮಾಡುತ್ತಿದ್ದ ಹುಡುಗಾಟದ ಚಿತ್ರ ಅಲ್ಲ ಇದು. ಹುಡುಗರಾಟದ ಚಿತ್ರ. ಹೌದು ಕ್ರಿಕೆಟ್ ಬಗ್ಗೆ ಬಾಲಿವುಡ್‌ನಲ್ಲಾಗಲೀ, ಭಾರತದ ಇತರೇ ಭಾಷೆಗಳಲ್ಲಾಗಲೀ ಸಿನಿಮಾ ಬರೋದು ವಿಶೇಷ ಸುದ್ದಿಯೇನಲ್ಲ. ಆದರೆ ಈಗ ಬರುತ್ತಿರೋ ಕ್ರಿಕೆಟ್ ಚಿತ್ರ ಇಂಡಿಯನ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ಜೀವನಗಾಥೆ. ಭಾಗ್ ಮಿಲ್ಕಾ ಭಾಗ್, ಮೇರಿಕೋಮ್ ಥರದ ಕ್ರೀಡಾಪಟುಗಳ ಚಿತ್ರಗಳು ಹಿಟ್ ಆಗುತ್ತಿದ್ದ ಹಾಗೆ ಜನಪ್ರಿಯ ಕ್ರೀಡೆಯ ಜನಪ್ರಿಯ ಸ್ಟಾರ್ ಬಗ್ಗೆ ಸಿನಿಮಾ ಮಾಡಲು ತಯಾರಿ ನಡೆದಿದೆ. ಕ್ರಿಕೆಟ್ ದಂತಕಥೆ ಸಚಿನ್ ಬಗ್ಗೆ ಸಿನಿಮಾ ಬರೋ ಮೊದಲೇ ಧೋನಿ ಚಿತ್ರ ಬರುತ್ತಿರೋದು ನಿಜಕ್ಕೂ ಅಚ್ಚರಿ. ಧೋನಿ ಚಿತ್ರದಲ್ಲಿ ಆಲಿಯಾಗೇನು ಕೆಲಸ ಅಂತೀರಾ? ಆಕೆ ಧೋನಿಯ ಪತ್ನಿ ಸಾಕ್ಷಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಅಂದಹಾಗೆ ಆಲಿಯಾ ಭಟ್ ತಂಗಿಯ ಹೆಸರೂ ಕೂಡ ಸಾಕ್ಷಿ ಅನ್ನೋದು ಕಾಕತಾಳೀಯವಷ್ಟೆ. ಚಿರುಪುತ್ರ ರಾಮ್ ಚರಣ್ ತೇಜ, ಜಾನ್ ಅಬ್ರಹಾಂ ಮುಂತಾದ ತಾರೆಗಳು ವಿವಿಧ ಕ್ರಿಕೆಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನೀರಜ್ ಪಾಂಡೆಯ ಈ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಧೋನಿಯಾಗಿ ಬ್ಯಾಟ್ ಮಾಡಲಿದ್ದಾನೆ.