ಜಗ್ ಜಗ್ ಜೀಯೋ ಚಿತ್ರ ಉತ್ತಮ ಆರಂಭ; ಮೊದಲ ದಿನವೇ 9 ಕೋಟಿ ಬಾಚಿದ ವರುಣ್ ಧವನ್ ರಾಜ್ ಮೆಹ್ತಾ ಅವರ ಜಗ್ ಜಗ್ ಜೀಯೋ ಚಿತ್ರ ಶುಕ್ರವಾರ ಥಿಯೇಟರ್‌ಗಳಲ್ಲಿ ತೆರೆಕಂಡಿದ್ದು, ಬಿಡುಗಡೆಯಾದ ದಿನವೇ ಬರೊಬ್ಬರಿ 9 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ವರದಿ... ಮುಂಬೈ: ರಾಜ್ ಮೆಹ್ತಾ ಅವರ ಜಗ್ ಜಗ್ ಜೀಯೋ ಚಿತ್ರ ಶುಕ್ರವಾರ ಥಿಯೇಟರ್‌ಗಳಲ್ಲಿ ತೆರೆಕಂಡಿದ್ದು, ಬಿಡುಗಡೆಯಾದ ದಿನವೇ ಬರೊಬ್ಬರಿ 9 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ವರದಿ ಮಾಡಿದ್ದಾರೆ. ವರುಣ್ ಧವನ್ ಹಾಗೂ ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ನೀತು ಕಪೂರ್, ಕಿಯಾರಾ ಅಡ್ವಾಣಿ, , ಮನೀಶ್ ಪಾಲ್ ಮತ್ತು ಪ್ರಜಕ್ತಾ ಕೋಲಿ ನಟಿಸಿದ್ದಾರೆ. ಮುಂಬೈ ಮತ್ತು ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಚಿತ್ರವು ವಿಶೇಷವಾಗಿ ಉತ್ತಮವಾಗಿ ಪ್ರದರ್ಶನ ಕಂಡಿದೆ ಎಂದು ತರಣ್ ಆದರ್ಶ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.ಇದನ್ನು ಓದಿ: 'ಕಾಫಿ ವಿತ್ ಕರಣ್ ಸೀಸನ್ 7': ಆರಂಭ ದಿನ ಪ್ರಕಟಿಸಿದ ನಿರ್ದೇಶಕ ಕರಣ್ ಜೋಹರ್ಜಗ್‌ಜಗ್ ಜೀಯೋ ಚಿತ್ರವನ್ನ ರಾಜ್ ಮೆಹ್ತಾ ನಿರ್ದೇಶಿಸಿದ್ದಾರೆ ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದೆ. ಚಲನಚಿತ್ರ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ.# : , ... # [ ], #, # ... ... 2 3 ... ₹ 9.28 . . ../s847CVA9PJ