'ತೂ ಚೀಜ್ ಬಡಿ ಹೈ ಮಸ್ಕ್ ಮಸ್ಕ್': ಟ್ವಿಟರ್'ನಲ್ಲಿ ಬ್ಲ್ಯೂಟಿಕ್ ಮರು ಸ್ಥಾಪನೆ, ಎಲಾನ್ ಮಸ್ಕ್'ಗೆ ಅಮಿತಾಬ್ ಬಚ್ಚನ್ ಧನ್ಯವಾದ ಹೇಳಿದ್ದು ಹೀಗೆ.... ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬ್ಲ್ಯೂಟಿಕ್ ಮರುಸ್ಥಾಪನೆಗೊಂಡಿದ್ದು, ಇದಕ್ಕೆ ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರಿಗೆ ವಿಶಿಷ್ಟ ರೀತಿಯಲ್ಲಿ ಧನ್ಯವಾದ ಹೇಳಿದ್ದಾರೆ. ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬ್ಲ್ಯೂಟಿಕ್ ಮರುಸ್ಥಾಪನೆಗೊಂಡಿದ್ದು, ಇದಕ್ಕೆ ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರಿಗೆ ವಿಶಿಷ್ಟ ರೀತಿಯಲ್ಲಿ ಧನ್ಯವಾದ ಹೇಳಿದ್ದಾರೆ.ಬ್ಲ್ಯೂಟಿಕ್ ಮರುಸ್ಥಾಪನೆಯಾಗಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಹೇ ಮಸ್ಕ್ ಬ್ರದರ್! ಧನ್ಯವಾದಗಳು. ನನ್ನ ಹೆಸರಿನ ಮುಂದೆ ಬ್ಲ್ಯೂ ಟಿಕ್ ಮರುಸ್ಥಾಪನೆಯಾಗಿದೆ. ಇದೀಗ ನಾನೇನು ಹೇಳಲಿ? ಹಾಡು ಹೇಳಬೇಕೆಂದು ಎನಿಸುತ್ತಿದೆ. ಕೇಳಲು ಬಯಸುತ್ತೀರಾ? ಎಂದು ಕೇಳಿದ್ದಾರೆ. ಇದೇ ವೇಳೆ ತೂ ಚೀಜ್ ಬಡಿ ಹೈ ಮಸ್ಕ್ ಮಸ್ಕ್... ತೂ ಚೀಜ್ ಬಡಿ ಹೈ ಮಸ್ಕ್ ಎಂದು ಹೇಳಿದ್ದಾರೆ. 4624 - ए भैया ! बहुत बहुत धन्यवाद देत हैं हम आपका ! उ , नील कमल लग गवा हमार नाम के आगे ! अब का बताई भैया ! गाना गये का मन करत है हमार ! सनबो का ? इ लेओ सुना : "तू चीज़ बड़ी है ... तू चीज़ बड़ी है, " — (@) 21, 2023ಶುಕ್ರವಾರವಷ್ಟೇ ದಿಟ್ಟ ಹೆಜ್ಜೆ ಇಟ್ಟಿದ್ದ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್, ಹಣ ಪಾವತಿಸದ ಹಲವು ಸೇಲಿಬ್ರಿಟಿಗಳ ಟ್ವಿಟ್ಟರ್ ಖಾತೆಯಿಂದ ನೀಲಿ ಟಿಕ್ ಅನ್ನು ತೆಗೆದುಹಾಕಿತ್ತು. ಇದರೊಂದಿಗೆ ಟ್ವಿಟರ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದ ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಬ್ಲೂ ಟಿಕ್ ನ್ನೂ ಕೂಡ ಕಸಿದುಕೊಂಡಿತ್ತು.ಇದನ್ನೂ ಓದಿ: ರಾಹುಲ್ ಗಾಂಧಿ, ಶಾರುಖ್ ಖಾನ್, ಕೇಜ್ರಿವಾಲ್ ಸೇರಿ ಹಲವರ ಟ್ವಿಟ್ಟರ್ ಖಾತೆಯಲ್ಲಿ ಬ್ಲ್ಯೂ ಟಿಕ್ ಮಾಯ!ಈ ಕುರಿತು ಟ್ವೀಟ್ ಮಾಡಿದ್ದ ಅಮಿತಾಭ್ ಬಚ್ಚನ್ ಅವರು, 'ಟಿ4623 ಎ ಟ್ವಿಟ್ಟರ್ ಅಣ್ಣ! ಕೇಳ್ತಾ ಇದೀಯಾ? ಇದೀಗ ನಾನು ಹಣವನ್ನು ಕಟ್ಟಿದ್ದಾಗಿದೆ... ಹೀಗಾಗಿ ನನ್ನ ಹೆಸರಿನ ಮುಂದೆ ಇರುತ್ತಲ್ಲ ಆ ನೀಲ ಕಮಲ, ಅದಾದರೂ ವಾಪಸ್ ಕೊಡು, ಜನರಿಗೆ ನಾನು ಅಮಿತಾಭ್ ಬಚ್ಚನ್ ಅಂತ ಗೊತ್ತಾಗಲಿ. ಕೈಮುಗಿದಿದ್ದಾಗಿದೆ, ಇನ್ನೇನು ನಿಮ್ಮ ಕಾಲಿಗೂ ಬೀಳಬೇಕೆ?' ಎಂದು ಹೇಳಿದ್ದರು.