ಬಾಹುಬಲಿ-2 ತೆರೆಕಾಣಲು ಸಿದ್ಧತೆ ನಡೆದಿರುವಂತೆಯೇ ಬಾಹುಬಲಿ-1 ಮತ್ತೆ ತೆರೆಗೆ! ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹುಬಲಿ-2 ಚಿತ್ರಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಈ ಹಿಂದೆ ತೆರೆಗೆ ಬಂದಿದ್ದ ಬಾಹುಬಲಿ-1 ಅನ್ನು ಮತ್ತೆ ದಾಖಲೆ ಚಿತ್ರ ಮಂದಿರಗಳಲ್ಲಿ ತೆರೆಗೆ ತರಲಾಗುತ್ತಿದೆ. ನವದೆಹಲಿ: ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹುಬಲಿ-2 ಚಿತ್ರಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಈ ಹಿಂದೆ ತೆರೆಗೆ ಬಂದಿದ್ದ ಬಾಹುಬಲಿ-1 ಅನ್ನು ಮತ್ತೆ ದಾಖಲೆ ಚಿತ್ರ ಮಂದಿರಗಳಲ್ಲಿ ತೆರೆಗೆ ತರಲಾಗುತ್ತಿದೆ. ಖ್ಯಾತ ಬಾಲಿವುಡ್ ಬಾಕ್ಸ್ ಅಫೀಸ್ ತಜ್ಞ ತರಣ್ ಆದರ್ಶ್ ಅವರು ಟ್ವೀಟ್ ಮಾಡಿರುವಂತೆ ಬಾಹುಬಲಿ-2 ಚಿತ್ರ ತೆರೆಗೆ ಬರುವ ಮುನ್ನ ಬಾಹುಬಲಿ-1 ಚಿತ್ರದ ಹಿಂದಿ ಅವತರಣಿಕೆ ದೇಶಾದ್ಯಂತ ಮತ್ತೆ ತೆರೆಗೆ ಬರುತ್ತಿದೆ. ಅದೂ ಕೂಡ ದಾಖಲೆ ಪ್ರಮಾಣದ ಸ್ಕ್ರೀನ್ ಗಳಲ್ಲಿ ಚಿತ್ರ ತೆರೆಕಾಣುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಮೂಲಗಳ ಪ್ರಕಾರ ಬಾಹುಬಲಿ-1 ಚಿತ್ರದ ಹಿಂದಿ ಅವತರಣಿಕೆ ಸುಮಾರು 900 ಸ್ಕ್ರೀನ್ ಗಳಲ್ಲಿ ತೆರೆಕಾಣುತ್ತಿದ್ದು, ಇದು ಬಾಲಿವುಡ್ ಇತಿಹಾಸದಲ್ಲಿಯೇ ಅತೀ ಹೆಚ್ಚು ಸ್ಕ್ರೀನ್ ಗಳ ರಿ-ರೀಲೀಸ್ ದಾಖಲೆಯಂತೆ. ಈ ಹಿಂದೆ 80-90ರ ದಶಕದಲ್ಲಿ ಸಾಮಾನ್ಯವಾಗಿದ್ದ ರಿ-ರಿಲೀಸ್ ಪ್ರಕ್ರಿಯೆ ಬಾಹುಬಲಿ ಮೂಲಕ ಮತ್ತೆ ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದು, ಆದೂ ಕೂಡ ದಾಖಲೆ ಪ್ರಮಾಣದ ಸ್ಕ್ರೀನ್ ಗಳಲ್ಲಿ ಬಾಹುಬಲಿ -1 ಮತ್ತೆ ತೆರೆಕಾಣುವ ಮೂಲಕ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ. ಅತ್ತೀ ಹೆಚ್ಚು ಸ್ಕ್ರೀನ್ ಗಳಲ್ಲಿ ಮತ್ತೆ ತೆರೆಕಂಡ ಮೊದಲ ಚಿತ್ರವಾಗಿ ಬಾಹುಬಲಿ-1 ಖ್ಯಾತಿಗಳಿಸಲಿದೆ. ಬಾಹುಬಲಿ-2 (ದ ಕನ್ ಕ್ಲೂಷನ್) ಚಿತ್ರವು ಬಾಹುಬಲಿ-1 (ದಿ ಬಿಗಿನಿಂಗ್) ಚಿತ್ರದ ಮುಂದುವರೆದ ಭಾಗವಾಗಿದ್ದು, ಚಿತ್ರದಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೂ ಉತ್ತರ ದೊರೆಯಲಿದೆ. ಇನ್ನು ಬಾಹುಬಲಿ-1 ಚಿತ್ರದ ರಿ-ರಿಲೀಸ್ ಅನ್ನು ಬಾಹುಬಲಿ-2 ಚಿತ್ರದ ಪ್ರಚಾರದ ಉದ್ದೇಶ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ನಿರ್ದೇಶಕ ರಾಜಮೌಳಿ ಚಾಣಾಕ್ಷರಾಗಿದ್ದು, ಬಾಹುಬಲಿ-1ಅನ್ನು ಮತ್ತೆ ತೆರೆಗೆ ತರುವ ಮೂಲಕ ಮತ್ತೆ ಪ್ರೇಕ್ಷಕರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಚಾಣಾಕ್ಷ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಏಪ್ರಿಲ್ 7ರಂದು ಬಾಹುಬಲಿ-1 ಚಿತ್ರ ಹಿಂದಿ ಭಾಷೆಯಲ್ಲಿ ದೇಶಾದ್ಯಂತ ತೆರೆಕಾಣುತ್ತಿದ್ದು, ಏಪ್ರಿಲ್ 28ರಂದು ಬಾಹುಬಲಿ-2 ಚಿತ್ರ ತೆರೆಗೆ ಬರುತ್ತಿದೆ. * * # [ ] - 900 ... . - # ... . # - ... ...- / 1970s, 1980s, 1990s, ...