ವಿದ್ಯಾಬಾಲನ್ ಗೆ "ಕೇರಳ ಹೆಮ್ಮೆ" ಗೌರವ ಖ್ಯಾತ ಬಾಲಿವುಡ್ ನಟಿ ವಿದ್ಯಾಬಾಲನ್ ಅವರಿಗೆ ವಿಶ್ವ ಮಲಯಾಳಿ ಕೌನ್ಸಿಲ್ ಹಾಗೂ ಕೈರಲಿ ಟಿವಿ ವತಿಯಿಂದ ‘ಪ್ರೈಡ್ ಆಫ್ ಕೇರಳ’ (ಕೇರಳದ ಹೆಮ್ಮೆ) ಪ್ರಶಸ್ತಿ ನೀಡಿ ಗೌರವಿಸಲಾಗಿದೆ... ಮುಂಬೈ: ಖ್ಯಾತ ಬಾಲಿವುಡ್ ನಟಿ ವಿದ್ಯಾಬಾಲನ್ ಅವರಿಗೆ ವಿಶ್ವ ಮಲಯಾಳಿ ಕೌನ್ಸಿಲ್ ಹಾಗೂ ಕೈರಲಿ ಟಿವಿ ವತಿಯಿಂದ ‘ಪ್ರೈಡ್ ಆಫ್ ಕೇರಳ’ (ಕೇರಳದ ಹೆಮ್ಮೆ) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವಿಚಾರವನ್ನು ಸ್ವತಃ ನಟಿ ವಿದ್ಯಾಬಾಲನ್ ಅವರೇ ಹಂಚಿಕೊಂಡಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದು ಸಂತಸ ಹಂಚಿಕೊಂಡಿದ್ದಾರೆ. 38 ವರ್ಷದ ಬಾಲಿವುಡ್ ನಟಿ ವಿದ್ಯಾಬಾಲನ್ ಮೂಲತಃ ಕೇರಳದವರಾಗಿದ್ದು, ಪರಿಣೀತಾ, ಪಾ, ನೋ ಒನ್ ಕಿಲ್ಡ್ ಜೆಸ್ಸಿಕಾ, ದಿ ಡರ್ಟಿ ಪಿಕ್ಚರ್ ಹಾಗೂ ಕಹಾನಿ ಚಿತ್ರಗಳ ಮೂಲಕ ಪ್ರೇಕ್ಷಕರ ಮನ ಗೆದಿದ್ದರು. ಪ್ರಸ್ತುತ ಈ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಸುಜಯ್ ಘೊಷ್ ನಿರ್ಮಾಣದ "TE3N' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇದರಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ನವಾಜುದ್ದಿನ್ ಸಿದ್ದಿಕಿ ನಟಿಸುತ್ತಿದ್ದಾರೆ.