ಧೂಮಪಾನ ಚಟ ಅಸಹ್ಯಕರ: ಸನ್ನಿ ಲಿಯೋನ್ ಸ್ಮೋಕ್ ಮಾಡುವುದು ಅಸಹ್ಯಕರ ಅಭ್ಯಾಸ ಎಂದು ನಟಿ ಸನ್ನಿ ಲಿಯೋನ್ ಅಭಿಪ್ರಾಯ ಪಟ್ಟಿದ್ದಾರೆ... ಮುಂಬಯಿ: ಸ್ಮೋಕ್ ಮಾಡುವುದು ಅಸಹ್ಯಕರ ಅಭ್ಯಾಸ ಎಂದು ನಟಿ ಸನ್ನಿ ಲಿಯೋನ್ ಅಭಿಪ್ರಾಯ ಪಟ್ಟಿದ್ದಾರೆ. ನಟರುಗಳಾದ ಅಲೋಕ್ ನಾಥ್ ಮತ್ತು ದೀಪಕ್ ದೋಬ್ರಿಯಾಲ್ ಅವರ ಜೊತೆ ಧೂಮಪಾನ ವಿರೋಧಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಸನ್ನಿ ಲಿಯೋನ್ ಧೂಮಪಾನ ಮಾಡುವುದು ಕೆಟ್ಟ ಚಟ ಎಂದಿದ್ದಾರೆ. ತಮ್ಮ ಧೂಮಪಾನ ವಿರೋಧಿ ಜಾಹೀರಾತು ನೋಡಿ ಜನ ಸ್ಮೋಕ್ ಮಾಡುವುದನ್ನು ನಿಲ್ಲಿಸುತ್ತಾರೆ ಎಂದು ನಂಬಿದ್ದೇನೆ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಮಸ್ತಿಜಾದೆ ನಂತರ ಒನ್ ನೈಟ್ ಸ್ಟಾಂಡ್ ಮತ್ತು ಬೀಮಾನ್ ಲವ್ ಚಿತ್ರಗಳಲ್ಲಿ ಸನ್ನಿ ಲಿಯೋನ್ ಅಭಿನಯಿಸುತ್ತಿದ್ದಾರೆ