ಪೋಷಕರ ಜೊತೆ ಬೆಂಗಳೂರಲ್ಲಿ ದೀಪಾವಳಿ ಆಚರಿಸಲಿರುವ ದೀಪಿಕಾ ಪಡುಕೋಣೆ ದೀಪಾವಳಿ ಹಬ್ಬ ತಮಗೆ ಯಾವಾಗಲು ವಿಶೇಷವಾಗಿದೆ. ಹೀಗಾಗಿ ಈ ಭಾರಿ ಬೆಂಗಳೂರಿನಲ್ಲಿ ತಂದೆ ತಾಯಿ ಹಾಗೂ ತಂಗಿಯೊಂದಿಗೆ ದೀಪಾವಳಿ ಆಚರಿಸುವುದಾಗಿ ... ಮುಂಬಯಿ: ದೀಪಾವಳಿ ಹಬ್ಬ ತಮಗೆ ಯಾವಾಗಲು ವಿಶೇಷವಾಗಿದೆ. ಹೀಗಾಗಿ ಈ ಭಾರಿ ಬೆಂಗಳೂರಿನಲ್ಲಿ ತಂದೆ ತಾಯಿ ಹಾಗೂ ತಂಗಿಯೊಂದಿಗೆ ದೀಪಾವಳಿ ಆಚರಿಸುವುದಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಿಳಿಸಿದ್ದಾರೆ. ಸಂಜಯ್ ಲೀಲ್ ಬನ್ಸಾಲಿ ಯ ಪದ್ಮಾವತಿ ಚಿತ್ರದಲ್ಲಿ ರಣ್ವೀರ್ ಸಿಂಗ್ ಜೊತೆ ನಟಿಸುತ್ತಿರುವ 30 ವರ್ಷದ ದೀಪಿಕಾ ಪಡುಕೋಣೆ, ಶೂಟಿಂಗ್ ಆರಂಭವಾಗುವ ಮುನ್ನ ತಮ್ಮ ಅತ್ಯಮೂಲ್ಯವಾದ ಸಮಯವನ್ನು ಪೋಷಕರ ಜೊತೆ ಕಳೆಯಲು ನಿರ್ಧರಿಸಿದ್ದಾರೆ. ದೀಪಾವಳಿ ಎಲ್ಲರಿಗೂ ವಿಶೇಷವಾದ ಹಬ್ಬ, ಬೆಳಕಿನ ಹಬ್ಬ, ಸಂತೋಷ, ಸಡಗರದ ಹಬ್ಬ, ಹೀಗಾಗಿ ನಾನು ಕುಟುಂಬಸ್ಥರ ಜೊತೆ ಈ ವರ್ಷ ದೀಪಾವಳಿ ಆಚರಿಸುತ್ತಿರುವುದಾಗಿ ಹೇಳಿದ್ದಾರೆ.