ಬಾಲಿವುಡ್ ನಟ ಫರಾಜ್ ಖಾನ್ ಅನಾರೋಗ್ಯದಿಂದ ನಿಧನ ಹಲವು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಿವುಡ್‌ ನಟ ಫರಾಜ್‌ ಖಾನ್‌ ಬುಧವಾರ ನಿಧನರಾಗಿದ್ದಾರೆ. 60 ವರ್ಷದ ಈ ನಟ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಹಲವು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಿವುಡ್‌ ನಟ ಫರಾಜ್‌ ಖಾನ್‌ ಬುಧವಾರ ನಿಧನರಾಗಿದ್ದಾರೆ. 60 ವರ್ಷದ ಈ ನಟ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ‘ಮೆಹಂದಿ’ ‘ಫರೇಬ್‌’ ಮುಂತಾದ ಸಿನಿಮಾಗಳಿಂದ ಇವರು ಖ್ಯಾತಿ ಪಡೆದಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.ಇವರ ಸಾವಿನ ಸುದ್ದಿಯನ್ನು ಖಚಿತಪಡಿಸಿರುವ ನಟಿ, ನಿರ್ಮಾಪಕಿ ಪೂಜಾ ಭಟ್‌ ‘ನಾನು ಅತ್ಯಂತ ದುಃಖಿತಳಾಗಿದ್ದೇನೆ. ಇಂದು ಫರಾಝ್ ಖಾನ್ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರಿಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು. ಅವರ ಕುಟುಂಬಕ್ಕೆ ನಿಮ್ಮ ಹಾರೈಕೆ ಇರಲಿ. ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲಿ. ಅವರ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಕಳೆದ 1 ವರ್ಷದಿಂದಲೂ ಫರಾಜ್‌ಗೆ ತೀವ್ರ ಕೆಮ್ಮು ಇತ್ತು. ಆಸ್ಪತ್ರೆಗೆ ದಾಖಲಿಸಿದ ಬಳಿಕ ಶ್ವಾಸಕೋಶ ಮಾತ್ರವಲ್ಲದೆ ಮಿದುಳಿನಲ್ಲಿಯೂ ಇನ್‌ಫೆಕ್ಷನ್‌ ಆಗಿರುವುದು ಗೊತ್ತಾಯಿತು. ಹಲವು ದಿನಗಳಿಂದ ಅವರು ವೆಂಟಿಲೇಟರ್‌ನಲ್ಲಿ ಇದ್ದರು. ಚಿಕಿತ್ಸೆಗೆ ಸ್ಪಂದಿಸುತ್ತಿದ್ದರಾದರೂ ಅವರಿಗೆ ಪ್ರಜ್ಞೆ ಬಂದಿರಲಿಲ್ಲ ಎಂಬ ಮಾಹಿತಿಯನ್ನು ಫರಾಜ್‌ ಸಹೋದರ ಫಹ್ಮಾನ್‌ ಖಾನ್‌ ಹಂಚಿಕೊಂಡಿದ್ದರು.ಕುಟುಂಬದವರ ಬಳಿ ಇದ್ದ ಹಣವೆಲ್ಲ ಖಾಲಿ ಆಗಿ, ಚಿಕಿತ್ಸೆಗಾಗಿ ಇನ್ನೂ 25 ಲಕ್ಷ ರೂ. ಬೇಕಾಗಿದೆ ಎಂದು ಫರಾಜ್‌ ಕುಟುಂಬದವರು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸಲ್ಮಾನ್‌ ಖಾನ್‌, ಫೂಜಾ ಭಟ್‌ ಮುಂತಾದ ಸೆಲೆಬ್ರಿಟಿಗಳು ಸ್ಪಂದಿಸಿದ್ದರು. ಕಡೆಗೂ ಫರಾಜ್‌ ಬದುಕುಳಿಯಲಿಲ್ಲ. # 1970- 2020 ../Rw0SdkMym5