ಶೀಘ್ರದಲ್ಲೇ ಸನ್ನಿ ಲಿಯೋನ್ ಫಿಟ್‌ನೆಸ್ ವಿಡಿಯೋ ಬಿಡುಗಡೆ ಬಾಲಿವುಡ್ ನಟಿಯರಾದ ಶಿಲ್ಪಾ ಶೆಟ್ಟಿ ಹಾಗೂ ಬಿಪಾಶಾ ಬಸು ನಂತರ ಇದೀಗ ಬಾಲಿವುಡ್ ನಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಶೀಘ್ರದಲ್ಲೇ... ಬಾಲಿವುಡ್ ನಟಿಯರಾದ ಶಿಲ್ಪಾ ಶೆಟ್ಟಿ ಹಾಗೂ ಬಿಪಾಶಾ ಬಸು ನಂತರ ಇದೀಗ ಬಾಲಿವುಡ್ ನಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಶೀಘ್ರದಲ್ಲೇ ತನ್ನ ಮೊದಲ ಫಿಟ್‌ನೆಸ್ ವಿಡಿಯೋ ಬಿಡುಗಡೆ ಮಾಡಲಿದ್ದಾರೆ. ಸನ್ನಿ ಇದಕ್ಕಾಗಿ ಖ್ಯಾತ ಫಿಟ್‌ನೆಸ್ ಗುರು ಮಿಕೆಯ್ ಮೆಹ್ತಾ ಅವರಿಂದ ತರಬೇತಿ ಪಡೆದಿದ್ದಾರೆ. 53 ವರ್ಷದ ಸೆಲೆಬ್ರಿಟಿ ತರಬೇತಿದಾರ ಮೆಹ್ತಾ ಅವರು ಫಿಟ್‌ನೆಸ್ ವಿಡಿಯೋಗಾಗಿ ಸನ್ನಿ ಲಿಯೋನ್‌ಗೆ ತರಬೇತಿ ನೀಡಿದ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದು, ' ಸನ್ನಿ ಅದ್ಭುತವಾಗಿ ಮಾಡಿದ್ದಾರೆ. ಫಿಟ್‌ನೆಸ್ ಸಂಬಂಧಿಸಿದ ಎಲ್ಲಾ ಅಂಗಸಾಧನೆಗಳನ್ನು ಅವರು ಸುಲಭವಾಗಿಯೇ ಕಲಿತರು' ಎಂದಿದ್ದಾರೆ. ಶಿಲ್ಪಾ ಶೆಟ್ಟಿ ಹಾಗೂ ಬಿಪಾಶಾ ಬಸುಗಿಂತ ಸನ್ನಿ ಲಿಯೋನ್ ಫಿಟ್‌ನೆಸ್ ವಿಡಿಯೋ ತುಂಬಾ ಭಿನ್ನವಾಗಿದೆ. ಏಕೆಂದರೆ ಸನ್ನಿ ತುಂಬಾ ಸುಲಭವಾದ ವ್ಯಾಯಾಮಗಳನ್ನು ಮಾಡಿದ್ದಾರೆ. ಅವುಗಳನ್ನು ಯಾರುಬೇಕಾದರೂ ಮನೆಯಲ್ಲಿ ಮಾಡಬಹುದು ಎಂದು ಮೆಹ್ತಾ ಹೇಳಿದ್ದಾರೆ.