ಒಂದೇ ಸ್ಟುಡಿಯೋದಲ್ಲಿ ಸಲ್ಲು-ಐಶೂ ಒಂದು ಕಾಲದಲ್ಲಿ ವಿಧಿಯಿಂದ ದೂರವಾಗಿದ್ದ ಬಾಲಿವುಡ್ ನ ಹಾಟ್ ಜೋಡಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ... ಒಂದು ಕಾಲದಲ್ಲಿ ವಿಧಿಯಿಂದ ದೂರವಾಗಿದ್ದ ಬಾಲಿವುಡ್ ನ ಹಾಟ್ ಜೋಡಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ಏಕಕಾಲಕ್ಕೆ ಒಂದೇ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಮೆಹಬೂಬ್ ಸ್ಟುಡಿಯೋದಲ್ಲಿ ಏಕಕಾಲಕ್ಕೆ ಆಗಮಿಸಿದ್ದರೂ, ಇಬ್ಬರು ಪರಸ್ಪರ ಭೇಟಿಯಾಗಲಿಲ್ಲವಂತೆ. ಐಶ್ವರ್ಯ ಮ್ಯಾಗಜೈನ್ ಕವರ್ ಫೋಟೋ ಶೂಟ್ ಗಾಗಿ ಆಗಮಿಸಿದ್ದರು ಹಾಗೂ ಸಲ್ಮಾನ್ ಖಾನ್ ಬೀಯಿಂಗ್ ಹ್ಯೂಮನ್ ಅಭಿಯಾನಕ್ಕಾಗಿ ಆಗಮಿಸಿದ್ದರು. ಇಬ್ಬರು ಪ್ರತ್ಯೇಕವಾಗಿ ಶೂಟ್ ನಡೆಸಿ ತೆರಳಿದ್ದು, ಒಬ್ಬರನ್ನೊಬ್ಬರು ಭೇಟಿಯಾಗಿಲ್ಲ ಎಂದು ವರದಿಗಳು ಹೇಳುತ್ತಿವೆ.