'ಪಠಾಣ್ ದಿನ': ಶುಕ್ರವಾರ ದೇಶದಾದ್ಯಂತ ಎಲ್ಲಾ ಥಿಯೇಟರ್‌ಗಳಲ್ಲಿ 110 ರೂ.ಗೆ ಚಿತ್ರದ ಟಿಕೆಟ್ ಲಭ್ಯ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ಸ್ಪೈ ಆಕ್ಷನ್ ಚಿತ್ರ 'ಪಠಾನ್'ಗೆ ಶುಕ್ರವಾರ ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಕಡಿಮೆ ದರದಲ್ಲಿ ಟಿಕೆಟ್ ಲಭ್ಯವಿರುತ್ತದೆ. ಈ ಸಿನಿಮಾ ಭಾರತದಲ್ಲಿನ ಚಿತ್ರಮಂದಿರಗಳಾದ್ಯಂತ ಫ್ಲಾಟ್ 110 ರೂ.ಗೆ ಪ್ರದರ್ಶನಕ್ಕೆ ಲಭ್ಯವಿರುತ್ತದೆ. ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ಸ್ಪೈ ಆಕ್ಷನ್ ಚಿತ್ರ 'ಪಠಾನ್'ಗೆ ಶುಕ್ರವಾರ ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಕಡಿಮೆ ದರದಲ್ಲಿ ಟಿಕೆಟ್ ಲಭ್ಯವಿರುತ್ತದೆ. ಈ ಸಿನಿಮಾ ಭಾರತದಲ್ಲಿನ ಚಿತ್ರಮಂದಿರಗಳಾದ್ಯಂತ ಫ್ಲಾಟ್ 110 ರೂ.ಗೆ ಪ್ರದರ್ಶನಕ್ಕೆ ಲಭ್ಯವಿರುತ್ತದೆ.ಗಲ್ಲಾಪೆಟ್ಟಿಗೆಯಲ್ಲಿ ಚಿತ್ರದ ಪ್ರದರ್ಶನವನ್ನು ಆಚರಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಏಕೆಂದರೆ, ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ಹಿಂದಿ ಚಲನಚಿತ್ರೋದ್ಯಮವನ್ನು ಏಕಾಂಗಿಯಾಗಿ ರಕ್ಷಿಸಿದೆ ಮತ್ತು ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ 963 ಕೋಟಿ ರೂ. ಗಳನ್ನು ಸಂಗ್ರಹಿಸುವ ಮೂಲಕ ದಾಖಲೆ ಬರೆದಿದೆ.ಇದನ್ನೂ ಓದಿ: ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 'ಪಠಾಣ್' 900 ಕೋಟಿ ರೂ. ಕಲೆಕ್ಷನ್!ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಪಠಾಣ್ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರ ಎಂದು ಆಚರಿಸಲು, ಭಾರತದ ಅಗ್ರ ಥಿಯೇಟರ್ ಸರಪಳಿಗಳಾದ ಪಿವಿಆರ್, , , , , MuktaA2 ಮತ್ತು ಇತರ ಚಿತ್ರಮಂದಿರಗಳು ಈ ಶುಕ್ರವಾರವನ್ನು 'ಪಠಾಣ್ ದಿನ' ಎಂದು ಆಚರಿಸಲು ಒಗ್ಗೂಡಿವೆ.ಶಾರುಖ್ ಖಾನ್ ಅಭಿನಯದ 'ಪಠಾನ್' ಭಾರತದಲ್ಲಿ 498.85 ಕೋಟಿ (ಹಿಂದಿ - 481.35 ಕೋಟಿ ರೂ., ಡಬ್ಬಿಂಗ್- 17.50 ಕೋಟಿ ರೂ.) ರೂಪಾಯಿಗಳನ್ನು ಗಳಿಸಿದೆ.ಇದನ್ನೂ ಓದಿ: 'ಶಾರುಖ್ ಖಾನ್ ನಟ ಅಲ್ಲ, ಅವರೊಂದು ಭಾವನೆ, ದೇಶದ ನಂಬರ್ 1 ಆಕ್ಷನ್ ಹೀರೋ': ಜಾನ್ ಅಬ್ರಹಾಂಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ ಮತ್ತು ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರವು, ತನ್ನ ಕುಟುಂಬದ ಮೇಲೆ ದಾಳಿ ಮಾಡಿ ಕೊಲ್ಲಲ್ಪಟ್ಟ ನಂತರ ಉಗ್ರವಾಗಿ ಹಿಂತಿರುಗಿದ ಮಾಜಿ ಏಜೆಂಟ್‌ನ ದುಷ್ಟ ಯೋಜನೆಗಳಿಂದ ದೇಶವನ್ನು ಉಳಿಸಲು ಹೋರಾಡುವ ಪತ್ತೇದಾರಿಯ ಕಥೆಯನ್ನು ಹೇಳುತ್ತದೆ.