ಮತ್ತೆ ಅಖಾಡಕ್ಕಿಳಿದ ಪೂನಂ ಪಾಂಡೆ ಬೆಲ್ಲಿ ನೃತ್ಯದ ತೀವ್ರ ಅಭ್ಯಾಸದಲ್ಲಿ ಬೆನ್ನು ನೋವು ತರಿಸಿಕೊಂಡು ವಿರಾಮದಲ್ಲಿದ್ದ ನಟಿ ಪೂನಂ ಪಾಂಡೆ ಮತ್ತೆ ನಟನೆಗೆ ವಾಪಸಾಗಿದ್ದಾರೆ. 'ಹೆಲೆನ್' ಚಿತ್ರದ ನಟನೆಗಾಗಿ ಪೂನಂ ಮುಂಬೈ: ಬೆಲ್ಲಿ ನೃತ್ಯದ ತೀವ್ರ ಅಭ್ಯಾಸದಲ್ಲಿ ಬೆನ್ನು ನೋವು ತರಿಸಿಕೊಂಡು ವಿರಾಮದಲ್ಲಿದ್ದ ನಟಿ ಪೂನಂ ಪಾಂಡೆ ಮತ್ತೆ ನಟನೆಗೆ ವಾಪಸಾಗಿದ್ದಾರೆ. 'ಹೆಲೆನ್' ಚಿತ್ರದ ನಟನೆಗಾಗಿ ಪೂನಂ ಬೆಳ್ಳಿ ಡ್ಯಾನ್ಸ್ ಗಾಗಿ ತಯಾರಿ ನಡೆಸಿದ್ದರು. ಆದರೆ ಬೆನ್ನು ಉಳುಕಿದ್ದರಿಂದ ಚಿತ್ರೀಕರಣವನ್ನು ಮುಂಡೂಡಬೇಕಾಯಿತಂತೆ. "ನಾವು ಮುಂಬೈ ಸ್ಟುಡಿಯೋದಲ್ಲಿ ಒಂದು ಕೋಟಿಯ ಸೆಟ್ ಹಾಕಿದ್ದೆವು. ಆದರೆ ಪೂನಂ ಅವರಿಗೆ ಸ್ವಲ್ಪ ಕಾಲದವರೆಗೆ ನೃತ್ಯ ಮಾಡದಂತೆ ವೈದ್ಯರು ಸಲಹೆ ನೀಡಿದ್ದರಿಂದ ನಾವು ಸೆಟ್ ಮತ್ತೆ ಬಿಚ್ಚಬೇಕಾಯಿತು. ಈಗ ಅವರು ಸರಿಯಾಗಿದ್ದಾರೆ, ಇನ್ನೊಂದು ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ" ಎನ್ನುತ್ತಾರೆ ನಿರ್ಮಾಪಕ ಸುರೇಶ್ ನಾಕುಂ. ಈ ಹಿಂದೆ ಪೂನಮ್ ನಟನೆಯ 'ನಶಾ'ಗಾಗಿ ಸಂಗೀತ ಮತ್ತು ನೃತ್ಯ ನಿರ್ದೇಶನ ಮಾಡಿದ್ದ ಅಜಿತ್ ರಾಜ್ಪಾಲ್ ಅವರೇ ಈ ಸಿನೆಮಾಗೂ ಸಂಗೀತ ಮತ್ತು ನೃತ್ಯ ನಿರ್ದೇಶಕ. 'ಹೆಲನ್' ಹೆಸರೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತದೆ. ಆ ಸಿನೆಮಾದ ನಂತರ ಪೂನಂ ಅವರ ವೃತ್ತಿಪರ ಜೀವನವೇ ಬದಲಾಗುತ್ತದೆ ಎನ್ನುತ್ತಾರೆ ರಾಜ್ಪಾಲ್.