ಅಮೇರಿಕನ್ ಬಾಯ್ ಫ್ರೆಂಡ್ ಜೊತೆ ಹಸಮಣೆ ಏರಲಿದ್ದಾಳೆ ಪ್ರೀತಿ! ಬಾಲಿವುಡ್ ಬ್ಯೂಟಿ ಹಾಗೂ ಕಿಂಗ್ ಇಲೆವನ್ ತಂಡದ ಮಾಲಕಿ ಪ್ರೀತಿ ಝಿಂಟಾ ಶೀಘ್ರವೇ ಸಪ್ತಪದಿ ತುಳಿಯಲಿದ್ದಾರಂತೆ... ಮುಂಬಯಿ: ಬಾಲಿವುಡ್ ಬ್ಯೂಟಿ ಹಾಗೂ ಕಿಂಗ್ ಇಲೆವನ್ ತಂಡದ ಮಾಲಕಿ ಪ್ರೀತಿ ಝಿಂಟಾ ಶೀಘ್ರವೇ ಸಪ್ತಪದಿ ತುಳಿಯಲಿದ್ದಾರಂತೆ. ಅಮೇರಿಕಾದಲ್ಲಿರುವ ಪ್ರೀತಿ ಝಿಂಟಾ ಬಾಯ್ ಫ್ರೆಂಡ್ ಜೊತೆ 2016 ರ ಜನವರಿಯಲ್ಲಿ ಅಮೇರಿಕಾದಲ್ಲೇ ವಿವಾಹ ನಡೆಯಲಿದೆ ಎಂದು ಬಾಲಿವುಡ್.ಕಾಮ್. ವರದಿ ಮಾಡಿದೆ. ಮೂಲಗಳ ಪ್ರಕಾರ ತನ್ನ ಅಮೆರಿಕನ್ ಬಾಯ್ ಫ್ರೆಂಡ್ ಜೀನ್ ಗುಡ್ ಎನಫ್ ಜೊತೆ ವಿವಾಹವಾಗಲಿದ್ದು, ಈ ಕಾರ್ಯಕ್ರಮದಲ್ಲಿ ಪ್ರೀತಿ ಝಿಂಟಾ ಸಂಬಂಧಿಕರು ಹಾಗೂ ಆತ್ಮೀಯ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ. 30 ವರ್ಷದ ಜೀನ್ ಗುಡ್ ಎನಫ್ ಲಾಸ್ ಎಂಜಲೀಸ್ ನಲ್ಲಿ ಹಣಕಾಸು ವಿಶ್ಲೇಷಕನಾಗಿದ್ದು, ನೆಸ್ ವಾಡಿಯಾ ಜೊತೆಗಿನ ಸಂಬಂಧ ಮುರಿದು ಬಿದ್ದ ನಂತರ ಈತನ ಜೊತೆಗೆ ಪ್ರೀತಿ ಗುಟ್ಟಾಗಿ ಅಫೈರ್ ಇಟ್ಟುಕೊಂಡಿದ್ದಳು ಎನ್ನಲಾಗಿದೆ.