ಧಾರ್ಮಿಕ ಭಾವನೆಗೆ ಧಕ್ಕೆ: ಬಾಲಿವುಡ್ ನಟ ರಣಬೀರ್ ಕಪೂರ್ ವಿರುದ್ಧ ದೂರು ಕೇಕ್ ಮೇಲೆ ಮದ್ಯ ಸುರಿದು ಬೆಂಕಿ ಹಚ್ಚಿ ಕ್ರಿಸ್‌ಮಸ್ ಆಚರಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮುಂಬೈನ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ. ಮುಂಬೈ: ಕೇಕ್ ಮೇಲೆ ಮದ್ಯ ಸುರಿದು ಬೆಂಕಿ ಹಚ್ಚಿ ಕ್ರಿಸ್‌ಮಸ್ ಆಚರಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮುಂಬೈನ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ಪ್ರಥಮ ಮಾಹಿತಿ ವರದಿ(ಎಫ್‌ಐಆರ್) ದಾಖಲಾಗಿಲ್ಲ.ತಮ್ಮ ವಕೀಲರಾದ ಆಶಿಶ್ ರಾಯ್ ಮತ್ತು ಪಂಕಜ್ ಮಿಶ್ರಾ ಅವರ ಮೂಲಕ ಘಾಟ್‌ಕೋಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸಂಜಯ್ ತಿವಾರಿ, ವಿಡಿಯೋದಲ್ಲಿ ನಟ ರಣಬೀರ್ ಕಪೂರ್ ಅವರು "ಜೈ ಮಾತಾ ದಿ" ಎಂದು ಹೇಳುವಾಗ ಕೇಕ್ ಮೇಲೆ ಮದ್ಯ ಸುರಿದು ಬೆಂಕಿ ಹಚ್ಚುತ್ತಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.ಇದನ್ನು ಓದಿ: ಮಗಳ ಜೊತೆ ರಣಬೀರ್-ಆಲಿಯಾ ದಂಪತಿ ಪೋಸ್, ಅಭಿಮಾನಿಗಳು ಖುಷ್!ಹಿಂದೂ ಧರ್ಮದಲ್ಲಿ, ಇತರ ದೇವತೆಗಳನ್ನು ಆವಾಹನೆ ಮಾಡುವ ಮೊದಲು ಅಗ್ನಿ ದೇವರನ್ನು ಆವಾಹನೆ ಮಾಡಲಾಗುತ್ತದೆ. ಆದರೆ ರಣಬೀರ್ ಕಪೂರ್ ಮತ್ತು ಅವರ ಕುಟುಂಬ ಸದಸ್ಯರು ಉದ್ದೇಶಪೂರ್ವಕವಾಗಿ ಮತ್ತೊಂದು ಧರ್ಮದ ಹಬ್ಬವನ್ನು ಆಚರಿಸುವಾಗ ಮದ್ಯ ಬಳಸಿರುವುದು ಮತ್ತು "ಜೈ ಮಾತಾ ದಿ" ಎಂದು ಘೋಷಣೆ ಕೂಗುವ ಮೂಲದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.