ಯೂಟ್ಯೂಬ್‌ನಲ್ಲಿ ಸಮೂಹ ಸನ್ನಿ! ಸನ್ನಿ ಲಿಯೋನ್‌ಳ ಬಹುನಿರೀಕ್ಷಿತ 'ಏಕ್ ಪೆಹೇಲಿ ಲೀಲಾ' ಸಿನಿಮಾ ಟ್ರಯಲರ್‌ಗೆ ದಾಖಲೆ... ನವದೆಹಲಿ: ಯೂಟ್ಯೂಬ್ ವೀಕ್ಷಕರು 'ಸಮೂಹ ಸನ್ನಿ'ಗೆ ಒಳಗಾಗಿದ್ದಾರೆ! ಸನ್ನಿ ಲಿಯೋನ್‌ಳ ಬಹುನಿರೀಕ್ಷಿತ 'ಏಕ್ ಪೆಹೇಲಿ ಲೀಲಾ' ಸಿನಿಮಾ ಟ್ರಯಲರ್‌ಗೆ ದಾಖಲೆ ಪ್ರಮಾಣದ ಹಿಟ್ಸ್ ಸಿಕ್ಕಿದೆ. ಕೇವಲ ನಾಲ್ಕೇ ದಿನಕ್ಕೆ 35 ಲಕ್ಷ ಮಂದಿ ವೀಕ್ಷಣೆ ಮಾಡುವ ಮೂಲಕ ಸನ್ನಿಯ ಗುಂಗಿನಲ್ಲಿರುವುದನ್ನು ಸಾಬೀತು ಮಾಡಿದ್ದಾರೆ. ಫೆ.6ರಂದು ಟ್ರಯಲರ್ ಅನ್ನು ಯೂಟ್ಯೂಬ್ ಮೂಲಕ ಬಿಡುಗಡೆ ಮಾಡಲಾಗಿತ್ತು. ಪ್ರಕಟ ಮಾಡಿ ಕೇವಲ 24 ಗಂಟೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು. ಇದೀಗ ನಾಲ್ಕೇ ದಿನಕ್ಕೆ 35 ಲಕ್ಷ ಹಿಟ್ಸ್ ಸಿಕ್ಕಿರುವುದು ಚಿತ್ರ ತಂಡಕ್ಕೆ ಭಾರಿ ಖುಷಿ ತಂದಿದೆ.