ಪಾಯಲ್ ಘೋಷ್ ಲೈಂಗಿಕ ದೌರ್ಜನ್ಯದ ಆರೋಪ: ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಎಫ್ಐಆರ್ ನಟಿ ಪಾಯಲ್ ಘೋಷ್ ದೂರಿನ ಹಿನ್ನೆಲೆಯಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರ ನಟಿ ಪಾಯಲ್ ಘೋಷ್ ದೂರಿನ ಹಿನ್ನೆಲೆಯಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆನಟಿ ಮತ್ತು ವಕೀಲ ನಿತಿನ್ ಸತ್ಪೂಟ್ ಅವರೊಂದಿಗೆ ಪೊಲೀಸರನ್ನು ಸಂಪರ್ಕಿಸಿದ ನಂತರ ಮಂಗಳವಾರ ತಡರಾತ್ರಿ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಬಾಲಿವುಡ್ ನಟಿ ಪಾಯಲ್ ಘೋಷ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅನುರಾಗ್ ಕಶ್ಯಪ್ ಅತ್ಯಾಚಾರವೆಸಗಿರುವುದಾಗಿ ಪಾಯಲ್ ದೂರಿನಲ್ಲಿ ಆರೋಪಿಸಿದ್ದಾರೆ.ಅನುರಾಗ್ ವಿರುದ್ಧ ಐಪಿಸಿ ಸೆಕ್ಷನ್ 376, 354, 341, 342ರ ಅಡಿಯಲ್ಲಿ ದೂರು ದಾಖಲಾಗಿದೆ ಎಂದು ಪಾಯಲ್ ಪರ ವಕೀಲ ನಿತಿನ್ ಸತ್ಪೂಟ್ ಟ್ವೀಟ್ ಮೂಲಕ ತಿಳಿಸಿದ್ದಾರೆ.ಸೆಪ್ಟೆಂಬರ್ 20 ರಂದು ಅನುರಾಗ್ ಕಶ್ಯಪ್ ಅವರ ವಕೀಲರು ಹೇಳಿಕೆ ನೀಡಿದ್ದು, "ನನ್ನ ಕಕ್ಷಿದಾರರು ಇತ್ತೀಚೆಗೆ ಅವರ ವಿರುದ್ಧ ಎದ್ದಿರುವ ಲೈಂಗಿಕ ಕಿರುಕುಳದ ಸುಳ್ಳು ಆರೋಪಗಳಿಂದ ತೀವ್ರ ನೋವುಂಡಿದ್ದಾರೆ. ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು, ದುರುದ್ದೇಶಪೂರಿತ ಮತ್ತು ಅಪ್ರಾಮಾಣಿವಾಗಿದೆ. " ಎಂದಿದ್ದಾರೆ.ಇದಕ್ಕೆ ಮುನ್ನ ಅನುರಾಗ್ ಕಶ್ಯಪ್, ಸೆಪ್ಟೆಂಬರ್ 19 ರಂದು ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು.