ಕನ್ನಡ ಕಿರುತೆರೆಯಲ್ಲಿ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಶಿಲ್ಪಾ ಶೆಟ್ಟಿ ಕಿರುತೆರೆ ಮೂಲಕ ಕನ್ನಡಕ್ಕೆ ಮತ್ತೆ ಎಂಟ್ರಿ ನೀಡುತ್ತಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಶೋಗೆ ಶಿಲ್ಪಾ ಶೆಟ್ಟಿಯನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ. ವಿವಾಹದ ನಂತರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಟೆನೆಯಿಂದ ದೂರ ಉಳಿದಿದ್ದರು. ರವಿಚಂದ್ರನ್ ಜೊತೆ ಒಂದಾಗೋಣ ಬಾ ಚಿತ್ರದಲ್ಲಿ ನಟಿಸಿದ ನಂತರ ಕನ್ನಡದ ಕಡೆ ತಿರುಗಿಯು ನೋಡಿರಲಿಲ್ಲ. ಈಗ ಶಿಲ್ಪಾ ಶೆಟ್ಟಿ ಕಿರುತೆರೆ ಮೂಲಕ ಕನ್ನಡಕ್ಕೆ ಮತ್ತೆ ಎಂಟ್ರಿ ನೀಡುತ್ತಿದ್ದಾರೆ. ಸುವರ್ಣ ವಾಹಿನಿಯಲ್ಲಿ ಆರಂಭವಾಗಿರುವ ಡ್ಯಾನ್ಸ್ ಡ್ಯಾನ್ಸ್ ಶೋಗೆ ಶಿಲ್ಪಾ ಶೆಟ್ಟಿಯನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ. ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆಯುತ್ತಿರುವ ಡ್ಯಾನ್ಸ್ ಡ್ಯಾನ್ಸ್ ಶೋ ಚಿತ್ರೀಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಒಂದು ದಿನವಿಡೀ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ತಮ್ಮ ಆಗಮನವನ್ನು ರಹಸ್ಯವಾಗಿರಿಸಿದ್ದ ಶಿಲ್ಪಾ ಮಾಧ್ಯಮದವರಿಗೂ ಸಿಗಲಿಲ್ಲ. ಚಿತ್ರೀಕರಣದ ನಂತರ ಸಂಜೆ ತೀರ್ಪುಗಾರರು ಹಾಗೂ ಸಿಬ್ಬಂದಿ ಜೊತೆ ಸೆಲ್ಫಿಗೆ ಮುಖ ತೋರಿಸಿ ವಾಪಾಸಾಗಿದ್ದಾರೆ.ಈ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಅತಿಥಿಯಾಗಿ ಆಗಮಿಸಿದ್ದರು. ಫೆ.15 ರಂದು ಈ ಕಾರ್ಯಕ್ರಮ ಪ್ರಸಾರವಾಗಲಿದೆ.